ಮೋದಿಯವರ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದ ಅಮಿತ್ ಶಾ
ವಿಜಯ ದರ್ಪಣ ನ್ಯೂಸ್ ನವದೆಹಲಿ, ಸೆಪ್ಟೆಂಬರ್ 01 ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಶುಕ್ರವಾರ ದೇಶದ ರಾಜಧಾನಿ ದೆಹಲಿಯಲ್ಲಿ ‘ನನ್ನ ಮಣ್ಣು, ನನ್ನ ದೇಶ’ (ಮೇರಿ ಮಾಠಿ, ಮೇರಾ ದೇಶ್)’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾ, ‘ಮೇರಿ ಮಾಠಿ, ಮೇರಾ ದೇಶ್’ ಕಾರ್ಯಕ್ರಮದ ‘ಮಣ್ಣಿಗೆ ಸೆಲ್ಯೂಟ್, ವೀರರಿಗೆ ಸೆಲ್ಯೂಟ್’ ಎಂಬ ಅಡಿಬರಹವೇ ಈ ಅಭಿಯಾನದ ಮಹತ್ವದ ಬಗ್ಗೆ ಹೇಳುತ್ತದೆ ಎಂದರು. ಭಾರತ ಮಾತೆಯನ್ನು ವಿಮೋಚನೆಗೊಳಿಸಲು…