ನಾರಿ ಶಕ್ತಿ ವಂದನ ಅಧಿನಿಯಮ ಮಹಿಳಾ ಮೀಸಲಾತಿ – ರಾಷ್ಟ್ರೀಯ ನವನಿರ್ಮಾಣಕ್ಕೊಂದು ಹೆಜ್ಜೆ.
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಸೆಪ್ಟೆಂಬರ್ 19 ಮಹಿಳಾ ಮೀಸಲಾತಿಯು ಸಮೃದ್ಧಭಾರತಕ್ಕೆ ಹೆಜ್ಜೆ. ಹಲವಾರು ವರ್ಷಗಳಿಂದ ಎಳೆದಾಟಕ್ಕೆ ಕಾರಣವಾಗಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಅಂತೂ ಇಂತೂ ಹೊಸ ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾಗಿದ್ದು ಅತ್ಯಂತ ಸಂತಸ. ಕಳೆದ ೩ ದಶಕದ ಹೋರಾಟಕ್ಕೆ ಸಂದ ಫಲ, ಕೇಂದ್ರ ಸಕಾರಕ್ಕೆ ಅದರಲ್ಲೂ ಪ್ರಧಾನಿ ಮೋದಿಯವರಿಗೆ ದೇಶದ ಸಮಸ್ತ ಮಹಿಳೆಯರಿಂದ ಧನ್ಯಾಭಿನಂದನೆಗಳು. ೨೦೧೪ ರಲ್ಲಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ೩೩% ಮೀಸಲಾತಿಯನ್ನು ಭರವಸೆ ನೀಡಿತ್ತು. ೨೦೧೯ ರ ಕಾರ್ಯಸೂಚಿಯಲ್ಲಿ ಮತ್ತೇ ಭರವಸೆಯನ್ನು…