ಕಾನೂನು ವಿವಿ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ: ಕುಲಪತಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ವಿಜಯ ದರ್ಪಣ ನ್ಯೂಸ್… ವಾರಾಂತ್ಯವೂ ಪರೀಕ್ಷೆ: ಕಾನೂನು ವಿವಿ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ: ಕುಲಪತಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ; ಮಾನವ ಹಕ್ಕು ಆಯೋಗ, ಮಹಿಳಾ ಆಯೋಗಕ್ಕೂ ದೂರು. ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ-KSLU ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಭಾನುವಾರವೂ ಸೆಮಿಸ್ಟರ್ ಪರೀಕ್ಷೆ ನಿಗದಿಪಡಿಸಿರುವ ಕ್ರಮದ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಾರೆ. ಈ ಬೆಳವಣಿಗೆಯೂ ‘ರಾಜಭವನ V/S ಸರ್ಕಾರ’ ಎಂಬ ಬೆಳವಣಗೆಗೆ ಕಾರಣವಾಗುವ ಸಾಧ್ಯತೆಗಳಿವೆ. ಈ ವಿವಾದ ಹಿನ್ನೆಲೆಯಲ್ಲಿ ಕುಲಪತಿ ವಿರುದ್ದ…

Read More

ದೇಶದಲ್ಲಿ ನಡೆಯುವ ಪ್ರತಿ ಅತ್ಯಾಚಾರಕ್ಕೆ ನಾವೂ ಪರೋಕ್ಷ ಕಾರಣವೇ, ಅತ್ಯಾಚಾರಕ್ಕೆ ಪರಿಹಾರ ಉಂಟೇ…….

ವಿಜಯ ದರ್ಪಣ ನ್ಯೂಸ್… ಅತ್ಯಾಚಾರ……. ದೇಶದಲ್ಲಿ ನಡೆಯುವ ಪ್ರತಿ ಅತ್ಯಾಚಾರಕ್ಕೆ ನಾವೂ ಪರೋಕ್ಷ ಕಾರಣವೇ, ಅತ್ಯಾಚಾರಕ್ಕೆ ಪರಿಹಾರ ಉಂಟೇ…….   ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಷ್ಟ್ರ ವ್ಯಾಪಿ ಸುದ್ದಿಯಾಗಿದೆ. ಇಂದು ಬಹುತೇಕ ಇಡೀ ದೇಶದ ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನಾ ರೂಪದಲ್ಲಿ ಬೆಳಿಗ್ಗೆ 6 ರಿಂದ 24 ಗಂಟೆಗಳ ಬಂದ್ ಆಚರಿಸಲಾಗುತ್ತಿದೆ. ದೇಶದಲ್ಲಿ ಪ್ರತಿ…

Read More

ವಿಶಿಷ್ಟ ಐತಿಹಾಸಿಕ ನಾಟಕ ದೇವಾನಾಂಪ್ರಿಯ ಅಶೋಕ

ವಿಜಯ ದರ್ಪಣ ನ್ಯೂಸ್…  ವಿಶಿಷ್ಟ ಐತಿಹಾಸಿಕ ನಾಟಕ ದೇವಾನಾಂಪ್ರಿಯ ಅಶೋಕ ರಾಮನಗರ : ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ತನ್ನದೇ ಸ್ವಂತ ಸಂಸ್ಕೃತಿ ಕೇಂದ್ರ ರಾಮನಗರ ತಾಲ್ಲೂಕು, ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಇಪ್ಪತ್ತೊಂದು ದಿನಗಳ ರಂಗತರಬೇತಿ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು. ಕರ್ನಾಟಕ ಬಂಜಾರ ಭಾಷೆ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಕಾರ್ಯಾಗಾರವನ್ನು ಉದ್ಘಾಟಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ  ಬಾಬು ಕುಂಬಾಪುರ, ಅಪರ ಜಿಲ್ಲಾಧಿಕಾರಿ ಆರ್ ಚಂದ್ರಯ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ಬಾಬು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು….

Read More

ದರ್ಶನ್ – ಕನ್ನಡ ಚಿತ್ರರಂಗ – ಹೋಮ ಹವನ ಮತ್ತು ನಮ್ಮ ಅಂತರಂಗ……

ವಿಜಯ ದರ್ಪಣ ನ್ಯೂಸ್    ದರ್ಶನ್ – ಕನ್ನಡ ಚಿತ್ರರಂಗ – ಹೋಮ ಹವನ ಮತ್ತು ನಮ್ಮ ಅಂತರಂಗ…… ಕನ್ನಡ ಚಲನಚಿತ್ರದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಈಗ ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಪತ್ನಿ ರಾಜ್ಯದಾದ್ಯಂತ ಪ್ರಖ್ಯಾತ ಮತ್ತು ಬಹಳ ನಂಬಿಕೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಿದ್ದಾರೆ. ಸತ್ಯಕ್ಕೆ, ನ್ಯಾಯಕ್ಕೆ ಜಯ ಲಭಿಸುತ್ತದೆ ಎಂದು ಹೇಳುತ್ತಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗ ಈ ದರ್ಶನ್ ಬಿಡುಗಡೆಯ ವಿಷಯವನ್ನು ನೆಪವಾಗಿಟ್ಟುಕೊಂಡು ಒಟ್ಟಾರೆಯಾಗಿ ಚಿತ್ರರಂಗದ ಯಶಸ್ಸಿಗಾಗಿ…

Read More

ವರಮಹಾಲಕ್ಷ್ಮೀ ಹಬ್ಬದ ಖರೀದಿ ಭರಾಟೆ ಜೋರು

ವಿಜಯ ದರ್ಪಣ ನ್ಯೂಸ್ …. ವರಮಹಾಲಕ್ಷ್ಮೀ ಹಬ್ಬದ ಖರೀದಿ ಭರಾಟೆ ಜೋರು ವಿಜಯಪುರ: ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಮುನ್ನಾ ದಿನ  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮಾರುಕಟ್ಟೆಯಲ್ಲಿ ಹಾಗೂ ಅಂಗಡಿ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.   ಪ್ರಮುಖವಾಗಿ ಹಬ್ಬಕ್ಕೆ ಬೇಕಾಗಿರುವಂತಹ ಹೂವು, ಹಣ್ಣು, ಸಿಹಿ ತಿಂಡಿ ಸೇರಿದಂತೆ ಅಲಂಕಾರಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಸಾಮಾನ್ಯ ದಿನಗಳಿಗಿಂತ ಇದೀಗ ಬೆಲೆಯು ದುಬಾರಿಯಾಗಿದೆ. ಹೂವಿನ ದರ ದುಬಾರಿ:…

Read More

ರಾಷ್ಟ್ರ ಧ್ವಜಾರೋಹಣ” ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ

ವಿಜಯ ದರ್ಪಣ ನ್ಯೂಸ್… 78 ನೇ ಸ್ವಾತಂತ್ರ್ಯ ದಿನಾಚರಣೆ “ರಾಷ್ಟ್ರ ಧ್ವಜಾರೋಹಣ” ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 15, 2024  :- ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ “78ನೇ ಸ್ವಾತಂತ್ರ್ಯೋತ್ಸವ” ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು “ರಾಷ್ಟ್ರ ಧ್ವಜಾರೋಹಣ” ನೆರವೇರಿಸಿ “ತ್ರಿವರ್ಣ ಧ್ವಜ”ಕ್ಕೆ ಗೌರವ…

Read More

ಭಾರತದ ಸ್ವಾತಂತ್ರ್ಯೋತ್ಸವ 78….. 1947 – 2024

ವಿಜಯ ದರ್ಪಣ ನ್ಯೂಸ್… ನಾಡಿನ ಸಮಸ್ತ ಜನತೆಗೆ ಮತ್ತು ಓದುಗರಿಗೆ, ಹಿತೈಷಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು … ಮಂಡಿಬೆಲೆ ರಾಜಣ್ಣ ,ಸಂಪಾದಕ ವಿಜಯ ದರ್ಪಣ  *****†***************””””””********₹₹ ಭಾರತದ ಸ್ವಾತಂತ್ರ್ಯೋತ್ಸವ 78….. 1947 – 2024 ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 77 ವರ್ಷಗಳು, ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು. ಅದಕ್ಕಾಗಿ ಭಾರತದ ಸಂವಿಧಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳು…

Read More

ಪರಂಪರೆಯ ಕೊಂಡಿ ಕಳಚಿಕೊಂಡ ಸಾಹಿತ್ಯ ಶ್ರೇಷ್ಠವಾಗುವುದಕ್ಕೆ ಸಾಧ್ಯವಿಲ್ಲ !

ವಿಜಯ ದರ್ಪಣ ನ್ಯೂಸ್…. ಸಾಹಿತ್ಯ ವಿಮರ್ಶಗಳು ಸತ್ತ ಕಾಲಕ್ಕೆ….!!! ನಾನು ಆಗಾಗ ಓದಿಕೊಳ್ಳುವ ಕವಿ ಘನಶ್ಯಾಮ್ ಅಗರವಾಲ್ ಅವರ ಕವಿತೆಯ ಸಾರಾಂಶ ಹೀಗಿದೆ: ಈತ ರಾಜಕಾರಣಿ /  ಈತ ಬಾಂಬ್ ಸೃಷ್ಟಿಸಿದ /  ಈತನಿಗೆ ಹತ್ತು  ಬಾರುಕೋಲಿನಿಂದ ಬಾರಿಸಿರಿ. ಈತ ಧರ್ಮಗುರು /  ಈತ ಬಾಂಬಿಗೆ ಧರ್ಮದ ಬಣ್ಣ ನೀಡಿದ/  ಈತನಿಗೆ ಇಪ್ಪತ್ತು  ಬಾರುಕೋಲಿನಿಂದ ಬಾರಿಸಿರಿ. ಈತ ಕವಿ ಲೇಖಕ/  ಈತನಿದ್ದೂ ಬಾಂಬ್ ಸೃಷ್ಟಿಯಾಯಿತು/  ಈತನಿಗೆ ನೂರು  ಬಾರುಕೋಲಿನಿಂದ ಬಾರಿಸಿರಿ! ಒಬ್ಬ ಸಾಹಿತಿ/ಲೇಖಕ/ಕಲಾವಿದನ ಸಾಮಾಜಿಕ ಜವಾಬ್ದಾರಿ ಮತ್ತು…

Read More

ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ ಜಾಫರ್

ವಿಜಯ ದರ್ಪಣ ನ್ಯೂಸ್… ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ ಜಾಫರ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 14, 2024 :- ಸರ್ಕಾರಿ ಶಾಲಾ-ಕಾಲೇಜು, ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ ಜಾಫರ್…

Read More

ಹರ್ ಘರ್ ತಿರಂಗಾ ವಾಕತಾನ್ ಗೆ ಚಾಲನೆ

ವಿಜಯ ದರ್ಪಣ ನ್ಯೂಸ್… ಹರ್ ಘರ್ ತಿರಂಗಾ ವಾಕತಾನ್ ಗೆ ಚಾಲನೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 14 :- ಆಗಸ್ಟ್. 15 ರ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ‘ಹರ್ ಘರ್ ತಿರಂಗಾ ವಾಕತಾನ್ ಅಭಿಯಾನ’ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ…

Read More