ಶಿಕ್ಷಕರೋಬ್ಬರಲ್ಲಿ ತಂದೆ ತಾಯಿ ಇಬ್ಬರನ್ನೂ ಕಾಣಬಹುದು: ನಾಗೇಶ್.

ವಿಜಯ ದರ್ಪಣ ನ್ಯೂಸ್  ದೇವನಹಳ್ಳಿ ನವೆಂಬರ್ 18: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು. ತಂದೆ  ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲೇ ಕಾಣಲು ಸಾಧ್ಯವೆಂದು ಸೋಲೂರು ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ನಾಗೇಶ್ ಅಭಿಪ್ರಾಯಿಸಿದರು. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಸೋಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಶನಿವಾರ ಹಮ್ಮಿಕೊಂಡಿದ್ದು , ಸಮಾರಂಭವನ್ನು ಉದ್ದೇಶಿ ಮಾತನಾಡಿದ ಅವರು ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ…

Read More

ರೈತರು ಕಡ್ಡಾಯವಾಗಿ “ಪ್ರೂಟ್ಸ್ ” ಅಡಿ ನೋಂದಾಯಿಸಿ ಗುರುತಿನ ಸಂಖ್ಯೆ ಪಡೆಯಲು ಜಿಲ್ಲಾಧಿಕಾರಿಗಳ ಕರೆ.

ರೈತರು ಕಡ್ಡಾಯವಾಗಿ “ಪ್ರೂಟ್ಸ್ ” ಅಡಿ ನೋಂದಾಯಿಸಿ ಗುರುತಿನ ಸಂಖ್ಯೆ ಪಡೆಯಲು ಜಿಲ್ಲಾಧಿಕಾರಿಗಳ ಕರೆ. ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 18  : ಫ್ರೂಟ್ಸ್/FRUITS (Farmers Registration and Unified Beneficiary information system) ಕರ್ನಾಟಕ ಸರ್ಕಾರ ಇ-ಆಡಳಿತ ಅಭಿವೃದ್ಧಿ ಪಡಿಸಿರುವ ಪೋರ್ಟಲ್ ಆಗಿದ್ದು, ಕಂದಾಯ ಇಲಾಖೆಯ “ಭೂಮಿ” ತಂತ್ರಾಂಶದಿಂದ ಸಂಯೋಜಿಸಲಾಗಿದೆ. ರೈತರ ಭೂ ಹಿಡುವಳಿಯ ವಿವರವನ್ನು ವಿಳಾಸ ಮತ್ತು ಬ್ಯಾಂಕ್’ ವಿವರದೊಂದಿಗೆ ನೋಂದಾಯಿಸಿ ರೈತರಿಗೆ ಗುರುತಿನ ಸಂಖ್ಯೆ/FID(Farmers ID) ನೀಡಲಾಗುವುದು….

Read More

ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಚಳವಳಿಯ ರೂಪದಲ್ಲಿ ಜಾರಿಗೆ ತರಬಲ್ಲ ಪಕ್ಷವೇ ಬಿಎಸ್ ಪಿ : ನರಸಿಂಹರಾಜು

ವಿಜಯ ದರ್ಪಣ ನ್ಯೂಸ್  ದೇವನಹಳ್ಳಿ ನವೆಂಬರ್ 18 : ಬಿಎಸ್’ಪಿ ಕೇವಲ ರಾಜಕೀಯ ಪಕ್ಷವಲ್ಲ. ಜನರನ್ನು ಒಗ್ಗೂಡಿಸಲು ಹೋರಾಡುತ್ತಿರುವ ಪಕ್ಷವಾಗಿದೆ. ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ಜನರನ್ನು ಉತ್ತಮ ವೇದಿಕೆಗೆ ತರುವ ಗುರಿಯನ್ನು ಹೊಂದಿರುವ ಪಕ್ಷವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ವಿಫಲವಾಗಿದೆ ಎಂದು ಬಿಎಸ್ಸಿ ಜಿಲ್ಲಾ ಮುಖಂಡ ನರಸಿಂಹರಾಜು ಅವರು ಟೀಕಿಸಿದರು. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರು ಹಾಗೂ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಬಲೀಕರಣಗೊಳಿಸುವಲ್ಲಿ…

Read More

ಈಗ ರಾಜ್ಯದಲ್ಲಿ, ಪಕ್ಷಾಂತರಿಗಳಿಗೆ ಪರ್ವಕಾಲ, ರೈತರಿಗೆ ಬರಗಾಲ, ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ……..

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್ 18 ಈಗ ರಾಜ್ಯದಲ್ಲಿ, ಪಕ್ಷಾಂತರಿಗಳಿಗೆ ಪರ್ವಕಾಲ, ರೈತರಿಗೆ ಬರಗಾಲ, ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ…….. ಕರ್ನಾಟಕದ ಚುನಾವಣೆ ನಡೆದು ಮತದಾನವಾಗಿ ಫಲಿತಾಂಶ ಪ್ರಕಟವಾಗಿ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಸುಮಾರು 6 ತಿಂಗಳು ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ಪಕ್ಷಗಳ ದೊಡ್ಡ ನಾಯಕರ ಹೇಳಿಕೆಗಳನ್ನು ಕ್ರೋಡೀಕರಿಸಿ ಹೇಳುವುದಾದರೆ, ಅವರ ಮಾತುಗಳಲ್ಲಿ ಶೇಕಡಾ 90% ಕೆಟ್ಟ ರಾಜಕೀಯದ ಅಂಶಗಳೇ ಇರುತ್ತವೆ. ಅವರ ನಡವಳಿಕೆಗಳಲ್ಲಿ ಮಾತ್ರ…

Read More

ಬರಗಾಲದ ಸಂದರ್ಭದಲ್ಲಿ ಜಾನುವಾರುಗಳ ನಿರ್ವಹಣೆ 

ವಿಜಯ ದರ್ಪಣ ನ್ಯೂಸ್  ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 18 : ಬರಗಾಲವು ಸಾಮಾನ್ಯವಾಗಿ ಉತ್ಪಾದನೆಯ ಚಕ್ರದಲ್ಲಿ ಒಣಹವೆಯ ವಾತಾವರಣವಾಗಿದ್ದು, ಮಳೆಯ ಪ್ರಮಾಣ ವಾರ್ಷಿಕ ಸರಾಸರಿಗಿಂತ ಕಡಿಮೆಯಾಗಿರುವುದರಿಂದ, ಕಾಳು ಕಟ್ಟುವ ಸಂದರ್ಭದಲ್ಲಿ ಮಣ್ಣಿನ ತೇವಾಂಶ ಕಡಿಮೆ ಇರುವುದರಿಂದ ಮತ್ತು ಕೆರೆ-ಕುಂಟೆಗಳಲ್ಲಿ ನೀರು, ಹರಿಯುವ ನೀರು, ಅಂತರ್ಜಲದ ನೀರಿನ ಮಟ್ಟ ಕಡಿಮೆಯಾಗುವುದರಿಂದ ಸಂಭವಿಸಬಹುದಾಗಿದೆ. ಇದು ಜಾನುವಾರು ಮತ್ತು ಜನರ ಆಹಾರ ಭದ್ರತೆಯ ಮೇಲೆ ಹಾಗೂ ರೈತರ ಆರ್ಥಿಕ ಮೂಲದ ಮೇಲೆ ನೇರ ಪರಿಣಾಮ…

Read More

ಸಾಯೋದಕ್ಕೆ ಒಂದೆರಡು ಕಾರಣಗಳಿದ್ದರೆ ಬದುಕೋಕೆ ಸಾವಿರಾರು ದಾರಿಗಳಿವೆ

ವಿಜಯ ದರ್ಪಣ ನ್ಯೂಸ್ ಕುಣಿಕೆಗೆ ಕೊರಳು ಕೊಡುವ ಮುನ್ನ ಕೊಂಚ ಯೋಚಿಸಿ ಜೀವ ಉಳಿಸಿ…           ಒಬ್ಬ ವಿಜಯವಂತ ವ್ಯಕ್ತಿಗೂ ಮತ್ತು ಇತರರಿಗೂ ಇರುವ ವ್ಯತ್ಯಾಸವು ಶಕ್ತಿಯ ಕೊರತೆ ಆಗಿರದೆ ಮನೋ ನಿರ್ಧಾರದ ಕೊರತೆ ಆಗಿರುತ್ತದೆ. ಎನ್ನುವ ಅರ್ಥಗರ್ಭಿತ ಮಾತುಗಳು ವಿನ್ಸ್ ಲೋಂಬಾರ್ಡ್ ಹೇಳಿರುವಂತವು. ಪ್ರತಿಯೊಬ್ಬರಿಗೂ ತಮ್ಮ ಬದುಕಿನ ಖಾಸಗಿ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳವ ಸಂಪೂರ್ಣ ಹಕ್ಕಿರುತ್ತದೆ. ಹಾಗಂತ ಆನೆ ನಡದದ್ದೇ ದಾರಿ ಎಂಬಂತೆ ಕೆಲವು ನಿರ್ಧಾರಗಳನ್ನು ಅದರಲ್ಲೂ ನಾವು…

Read More

ಭಾರತ – ಆಸ್ಟ್ರೇಲಿಯಾ… ಕ್ರಿಕೆಟ್ ಫೈನಲ್…..

ವಿಜಯ ದರ್ಪಣ ನ್ಯೂಸ್  ಅಕ್ಟೋಬರ್ 17 ಭಾರತ – ಆಸ್ಟ್ರೇಲಿಯಾ… ಕ್ರಿಕೆಟ್ ಫೈನಲ್….. ಕ್ರೀಡಾ ಘನತೆಯನ್ನು – ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ………. ಕ್ರಿಕೆಟ್ ಒಂದು ಜೂಜಾಟವಲ್ಲ, ಮೋಜಿನಾಟವೂ ಅಲ್ಲ, ಮನರಂಜನೆಯೂ ಅಲ್ಲ, ವ್ಯಾಪಾರವು ಅಲ್ಲ, ದೇಶದ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ,, ಅದೊಂದು ಕ್ರೀಡೆ, ಕೇವಲ ಕ್ರೀಡೆ ಮಾತ್ರ…….. 2023 ರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಡೆಸುವ ಒಂದು ದಿನದ 50/50 ಓವರುಗಳ ವಿಶ್ವಕಪ್ ಸ್ಪರ್ಧೆಯಲ್ಲಿ ಅಂತಿಮವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್…

Read More

ಸಂಪಂಗೆರೆ ಗ್ರಾಮದಲ್ಲಿ ಐದು ದಿನಗಳ ಸಂಭ್ರಮದ ದೀಪಾವಳಿ ಆಚರಣೆ

ವಿಜಯ ದರ್ಪಣ ನ್ಯೂಸ್  ಮಾಲೂರು: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಸೇರಿದ ಸಂಪಂಗೆರೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಹಳ ಹಿಂದಿನ ಕಾಲದಿಂದಲು ಪರಂಪರಾಗತವಾಗಿ ಶ್ರೀ ಗೌರಮ್ಮ ದೇವಿಯನ್ನು ಕುಳ್ಳಿರಿಸಿ ಭಕ್ತಿ ಮತ್ತು ಶ್ರದ್ಧೆ ನಿಷ್ಠೆಯಿಂದ ಪೂಜಿಸಿ ಐದು ದಿನಗಳ ಕಾಲ ನಿರಂತರವಾಗಿ ಆಚರಿಸಿ, ಬೆಳ್ಳಿ ಪಲ್ಲಕ್ಕಿಯೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಭಕ್ತಾದಿಗಳಿಗೆ ಪೂಜೆ ಪ್ರಸಾದ, ಅನ್ನಸಂತರ್ಪಣೆ, ಏರ್ಪಡಿಸಿ ಜಲವಿಸರ್ಜನೆ ಮಾಡಲಾಯಿತು.ಇಂತಹ ವೈಶಿಷ್ಟ್ಯ ಪೂರ್ಣದಿಂದ ಕೂಡಿದ ಹಬ್ಬವು ಸಂಪಂಗೆರೆ ಗ್ರಾಮದ ಭಕ್ತಾದಿಗಳ ಮತ್ತು ಕುಟುಂಬದ ತುಂಬು ಹೃದಯದ…

Read More

ಪರೀಕ್ಷಾ ಅಕ್ರಮಗಳು…..

ವಿಜಯ ದರ್ಪಣ ನ್ಯೂಸ್  ಬೆಂಗಳೂರು::ಅಕ್ಟೋಬರ್ 16 ಇಡೀ ದೇಶದಲ್ಲಿ ಇನ್ನೂ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಮತ್ತು ಹೆಚ್ಚು ಹೆಚ್ಚು ಅಕ್ರಮಗಳು ನಡೆಯುತ್ತಿರುವ ಮತ್ತೊಂದು ಕ್ಷೇತ್ರ ವಿವಿಧ ಪರೀಕ್ಷೆಗಳನ್ನು ನಡೆಸುವುದು……. ಎಷ್ಟೇ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರು ಈ ವಿಭಾಗದ ಕಳ್ಳತನ, ವಂಚನೆ, ಮೋಸ ತಡೆಯಲು ಸಾಧ್ಯವಾಗುತ್ತಿಲ್ಲ…… ಸಿಸಿಟಿವಿ, ಕೈ ಬೆರಳ ಗುರುತು, ಮುಖ ಚಹರೆಯ ಸ್ಕ್ಯಾನ್, ಅನಿರೀಕ್ಷಿತ ದಾಳಿ, ತಟಸ್ಥರ ಮೇಲ್ವಿಚಾರಣೆ, ಕಠಿಣ ಶಿಕ್ಷೆ ಇನ್ನೂ ಎಷ್ಟೇ ಭದ್ರತೆ ಮಾಡಿದ್ದರು ಯಾವುದೇ ಉತ್ತಮ ಫಲಿತಾಂಶ ಬಂದಿಲ್ಲ….. ಏನೇ ಮಾಡಿದರು ಒಂದಲ್ಲ…

Read More

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕೆಯುಡಬ್ಲ್ಯೂಜೆ ಯಿಂದ ಹಿರಿಯ ಪತ್ರಕರ್ತ ಬಾಸ್ಕರರಾವ್ ಗೆ ಗೌರವ

ವಿಜಯ ದರ್ಪಣ ನ್ಯೂಸ್ ಬೆಂಗಳೂರು: ಅಕ್ಟೋಬರ್ 16 ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತ ಎಂ.ಕೆ.ಬಾಸ್ಕರ ರಾವ್ ಅವರನ್ನು ಜೆಪಿ ನಗರದಲ್ಲಿರುವ ಅವರ ಮನೆಯಂಗಳಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಗೌರವಿಸುವ ಮೂಲಕ ಸರಳವಾಗಿ ದಿನಾಚರಣೆ ಆಚರಿಸಿತು. ಕೆಯುಡಬ್ಲೂೃಜೆ ಗೌರವ ಸ್ವೀಕರಿಸಿ ಮಾತನಾಡಿದ ಎಂ.ಕೆ.ಬಾಸ್ಕರರಾವ್, ರಾಷ್ಟ್ರೀಯ ಪತ್ರಿಕಾ ದಿನಾಚರಣೆ ದಿನವೇ ತಮಗೆ ಈ ಗೌರವ ದೊರೆತಿರುವುದು ತವರಿನಿಂದ ಬಂದ ಅಭಿಮಾನದ ಸನ್ಮಾನ ಎಂದು ಭಾವುಕರಾದರು. ನಾನು ಕೆಯುಡಬ್ಲೂೃಜೆ ಕಾರ್ಯದರ್ಶಿಯಾಗಿ, ಭಾರತೀಯ ಕಾರ್ಯನಿರತ ಒಕ್ಕೂಟದ…

Read More