ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ “
ವಿಜಯ ದರ್ಪಣ ನ್ಯೂಸ್ “ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ “ ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್ ಅವರ ಮಾತುಗಳಿವು. ಆ ಅನುಭವದ ಅನಿಸಿಕೆಯ ಹಿನ್ನೆಲೆಯಲ್ಲಿ…… ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ….