ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ…….
ವಿಜಯ ದರ್ಪಣ ನ್ಯೂಸ್…. ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ……. ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿದ, ಪ್ರಾಮಾಣಿಕ ಹಣ ಯಾವುದಕ್ಕೂ ಸಾಲುತ್ತಿಲ್ಲ….. ಹೀಗೊಂದು ವಾಸ್ತವ ಬದುಕು ಮತ್ತು ಚಿಂತನೆ ಹಲವರ ಗೊಣಗಾಟಕ್ಕೆ ಕಾರಣವಾಗಿದೆ……. ಆಧ್ಯಾತ್ಮಿಕ, ಧಾರ್ಮಿಕ, ಆದರ್ಶ ಚಿಂತನೆಗಳ ಹಿನ್ನೆಲೆಯನ್ನು ಹೊರತುಪಡಿಸಿ, ಸಹಜ ಸಾಮಾನ್ಯ ವ್ಯಾವಹಾರಿಕ ಜಗತ್ತಿನಲ್ಲಿ, ಈ ದೇಶದಲ್ಲಿ, ಬಡವರು, ಕೆಳ ಮಧ್ಯಮ ವರ್ಗದವರು ಮತ್ತು ಮಧ್ಯಮ ವರ್ಗದವರು ಖಂಡಿತವಾಗಲೂ ಕಷ್ಟಪಟ್ಟು ದುಡಿದ ಹಣದಲ್ಲಿ ಬದುಕುವುದು ತುಂಬಾ ಕಷ್ಟ. ಹಾಗೆ ಬದುಕಲೇ ಬೇಕಾದ ಸಂಕಲ್ಪ…