ಬದುಕು ಬದಲಿಸುವ ಉಡುಗೊರೆ!
ವಿಜಯ ದರ್ಪಣ ನ್ಯೂಸ್…. ಬದುಕು ಬದಲಿಸುವ ಉಡುಗೊರೆ! ಯಾವುದೇ ವಸ್ತು ಉಡುಗೊರೆ ಆಗುವುದು ಅದನ್ನು ನೋಡುವ ಭಾವದಿಂದ. ಉಡುಗೊರೆಯ ಹಿಂದಿರುವ ಭಾವನೆಯನ್ನು ಕಾಣದೇ ಹೋದರೆ ಅದು ಒಂದು ಜಡ ವಸ್ತು. ಬಾಳಿಗೆ ಬೆಳಕು ನೀಡುವ ಅಕ್ಷರ ರಾಶಿಯನ್ನು ಹೊತ್ತ ಹೊತ್ತಿಗೆಗಿಂತ ಮಿಗಿಲಾದ ಉಡುಗೊರೆ ಬೇರೇನಿದೆ? ಏನು ಉಡುಗೊರೆ ಕೊಡಬೇಕು? ಎನ್ನುವ ಗೊಂದಲದಲ್ಲಿ ಬೀಳುತ್ತೇವೆ. ಸ್ನೇಹಿತರನ್ನು ಉಡುಗೊರೆಯ ಪಟ್ಟಿ ಕೇಳುತ್ತೇವೆ. ಅವರು ಹೆಸರಿಸಿದ ಉಡುಗೊರೆಗಳು ನಮ್ಮ ಮನಸ್ಸಿಗೆ ಬರುವುದಿಲ್ಲ. ಬಂದರೂ ನಾವು ಕೊಡುವ ವ್ಯಕ್ತಿಗಳಿಗೆ ಇಷ್ಟವಾಗುತ್ತದೆಯೋ, ಇಲ್ಲವೋ? ಎನ್ನುವ…