
ಸ್ತ್ರೀಶಕ್ತಿಗಳ ಸಂಪೂರ್ಣ ಸಾಲ ಮನ್ನಾ ಮಾಡುವ ಶಕ್ತಿ ಕುಮಾರಣ್ಣನಿಗೆ ಮಾತ್ರ: ಮಾಜಿ ಸಚಿವೆ ಲೀಲಾವತಿ ಆರ್ ಪ್ರಸಾದ್…. ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಪರ ಮತಯಾಚನೆ.
ಭಾರತ ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಸರ್ಕಾರ ಯಾವುದಾದರೂ ಇದ್ದರೆ ಅದು ಜಾತ್ಯತೀತ ಜನತಾದಳ ಸರ್ಕಾರ ಎಂದು ಮಾಜಿ ಸಚಿವೆ ಲೀಲಾವತಿ ಆರ್ ಪ್ರಸಾದ್ ತಿಳಿಸಿದರು. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಅರದೇಶನಹಳ್ಳಿ ಗ್ರಾಮದಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಅವರ ಪರ ಮತಯಾಚನೆ ಮಾಡುತ್ತಾ ನಾನು ಜೆಡಿಎಸ್ ಪಕ್ಷ ಉದಯ ಆದಾಗಿನಿಂದ ಇಲ್ಲಿವರೆಗೂ ಪಕ್ಷದಲ್ಲಿ ಇದ್ದೇನೆ. ಹೆಚ್ ಡಿ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಿ ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ…