
ಬಿಜೆಪಿಯ ಕೆಲವು ಗದ್ಧಾರರಿಂದಲೇ ನನಗೆ ಸೋಲುಂಟಾಗಿದೆ: ಈಶ್ವರ್ ಸಿಂಗ್ ಠಾಕೂರ್
ಬೀದರ್, ಮೆ 14: ಬಿಜೆಪಿಯ ಕೆಲವು ಗದ್ದಾರರಿಂದಲೇ ತಮಗೆ ಸೋಲುಂಟಾಗಿದೆ ಎಂದು ಬಿಜೆಪಿ ಪಕ್ಷದ ಬೀದರ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರು ಆರೋಪಿಸಿದರು. ಅವರು ಇಂದು ಬೆಳಿಗ್ಗೆ ಬೀದರ ನಗರದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು. ತಮ್ಮ ವಿಶ್ವಾಸಕ್ಕೆ ಮತ್ತು ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿರುವ ಬಿಜೆಪಿಯ ಡಿಕೆ ಸಿದ್ರಾಮ್ ಹಾಗೂ ಇತರರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಮತ್ತು ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ…