
ಬಸವಣ್ಣನವರ ಬದುಕು ನಮಗೆ ಬೆಳಕು: ಜಯಶ್ರೀ.ಜೆ.ಅಬ್ಬಿಗೇರಿ
ಬದುಕಿನ ರೀತಿಯನ್ನು ಸರಳಗೊಳಿಸಿದರೆ ಸಮಸ್ಯೆಗಳು ಅರ್ಧದಷ್ಟು ಕಡಿಮೆಯಾಗುತ್ತವೆ. ಸರಳತೆಯನ್ನು ಅಳವಡಿಸಿಕೊಂಡರೆ ಬದುಕಿನಸೊಬಗು ಹೆಚ್ಚುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂದರೆ ೧೨ನೇ ಶತಮಾನದಲ್ಲಿ ಬಾಳಿ ಬದುಕಿದ ಜಗಜ್ಯೋತಿ ಬಸವಣ್ಣನವರು. ಶತಶತಮಾನಗಳಿಂದ ಶೋಷಿತರಾಗಿದ್ದವರಿಗೆ, ಸಮಾಜದಲ್ಲಿ ತುಳಿತಕ್ಕೊಳಾಗದವರಿಗೆ ಮೌಢ್ಯಕ್ಕೆ ಒಳಗಾದವರ ಶಕ್ತಿಯಾಗಿ, ನೊಂದವರ ಧ್ವನಿಯಾಗಿ ಸಿಕ್ಕರು. ಋಷಿಮುನಿಗಳು ‘ವೇದೋ ಧರ್ಮ ಮೂಲಂ’ ಎಂದು ಹೇಳಿದ್ದು ವೇದ ಉಪನಿಷತ್ತು ಆಗಮಗಳು ಮಾನ್ಯವಾದ ಸಾರ್ವಕಾಲಿಕ ಸತ್ಯಗಳಾದರೂ ಜನಸಾಮಾನ್ಯರಿಗೆ ಅವು ಗಗನದ ಕುಸುಮಗಳೇ ಸರಿ. ಈ ಸಂಗತಿಯನ್ನು ಅರಿತ ಬಸವಣ್ಣನವರು ಬದುಕಿಗೆ ಹತ್ತಿರವಾಗುವ ಸರಳ ವಚನ ಸಾಹಿತ್ಯದ ಮೂಲಕ…