ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ವಶಪಡಿಸಿಕೊಂಡ ಮೌಲ್ಯ ರೂ.4,66,28,349/-.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ವಿವಿಧ ತಂಡಗಳಿಂದ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೂ ವಶಪಡಿಸಿಕೊಂಡ ವಸ್ತುಗಳ ಒಟ್ಟಾರೆ ಮೌಲ್ಯ 4,66,28,349 ರೂ.ಗಳು. ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ ದಿನಾಂಕ: 29.03.2023 ರಿಂದ ದಿನಾಂಕ: 09.05.2023 ರವರೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ವಶಪಡಿಸಿಕೊಂಡಿರುವ ನಗದು, ಇತರೆ ವಸ್ತುಗಳ ವಿವರ ನಗದು: ಮೌಲ್ಯ ರೂ. 87,53,060, ಮದ್ಯ: ಮೌಲ್ಯ ರೂ. 2,82,40,047 (97124.760 ಲೀ.), ಮಾದಕ ವಸ್ತು: ಮೌಲ್ಯ ರೂ. 19,68,700 (30.899 ಕೆ.ಜಿ.) ,ಇತರೆ…