ಲಿಂಗಾಯತರಿಗೆ ಸಿ ಎಂ ಸ್ಥಾನ ನೀಡಬೇಕು: ಬಸವರಾಜ ಧನ್ನೂರ
ಬೀದರ್,ಮೇ.15:- 2023ರ ವಿಧಾನ ಸಭೆ ಸಾರ್ವತ್ರೀಕ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪ್ರಚಂಡ ಬಹುಮತದಿಂದ ಗೆದ್ದು 224 ಸ್ಥಾನಗಳಲ್ಲಿ 135 ಸ್ಥಾನಗಳು ಗಳಿಸಿ ನಿಚ್ಚಳ ಬಹುಮತ ಪಡೆದಿದೆ. ಲಿಂಗಾಯತ ಸಮುದಾಯ ಕಾಂಗ್ರೇಸ್ ಅಭ್ಯರ್ಥಿಗಳಿಗೆ ಬೆಂಬಲಿಸಿ ಗೆಲ್ಲಿಸಿರುವುದರಿಂದ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತ ಸಮುದಾಯದ ವ್ಯಕ್ತಿಗಳಿಗೆ ನೀಡಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬಸವರಾಜ ಧನ್ನೂರ ಅವರು ಬೀದರ ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೈಕಮಾಂಡಿಗೆ ಒತ್ತಾಯಿಸಿದರು. ಈ ಸಲದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ…