ಹಾಸ್ಯ ಸಾರ್ವಭೌಮನ ಜನ್ಮ ಶತಮಾನೋತ್ಸವ.
ವಿಜಯ ದರ್ಪಣ ನ್ಯೂಸ್ ಹಾಸ್ಯ ಸಾರ್ವಭೌಮ ನರಸಿಂಹರಾಜು ಜನ್ಮ ಶತಮಾನೋತ್ಸವ. ************************** ನವರಸಗಳ ಅಭಿನಯದಲ್ಲಿ ಆತ್ಯಂತ ಸವಾಲಿನದು ಎಂದರೆ ಅದು ಹಾಸ್ಯರಸದ ಆಭಿವ್ಯಕ್ತಿ ! ಮತ್ತೊಬ್ಬರನ್ನು ನಗಿಸುವ ಕೆಲಸ ಎಂದರೆ ನಾವು ನಕ್ಕಷ್ಟು ಸುಲಭವಲ್ಲ. ನಗಿಸುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು, ಮಾತುಗಳಲ್ಲಿ ಪಂಚಿಂಗ್ ಹಾಗೂ ಡೈಲಾಗ್ ಡಿಲಿವರಿಯಲ್ಲಿ ಟೈಮಿಂಗ್ಸ್ ಇರಬೇಕು ! ಇವೆಲ್ಲದರ ಜೊತೆಗೆ ಮತ್ತೊಬ್ಬರಿಗೆ ನೋವಾಗದಂತೆ ಹಾಗೂ ಸಭ್ಯತೆಯ ಎಲ್ಲೆ ಮೀರದಂತೆ ನಗಿಸುವುದು ಎಂದರೆ ಅದಕ್ಕೆ ಕಲಾವಿದನಾದವನು ಪರಿಪಕ್ವನಾಗಿರಬೇಕು . ಹಾಸ್ಯಕ್ಕಿರುವ ಮಹತ್ವವನ್ನು ಅರಿತೇ ಬಹುಶಃ…