ನಮ್ಮನ್ನು ಅಗಲಿದ ಮಾತಂಡ ಮೊಣ್ಣಪ್ಪನವರೊಂದಿಗೆ ಆ ದಿನಗಳು : ಶ್ರೀಧರ್ ನೆಲ್ಲಿತ್ತಾಯ

ವಿಜಯ ದರ್ಪಣ ನ್ಯೂಸ್ ಮಡಿಕೇರಿ  ಮಾತoಡ ಮೊಣ್ಣಪ್ಪ, ಈ ಹೆಸರಿನಲ್ಲಿ ಇದೆ ಮಾನವೀಯ ಗುಣಗಳು, ಸರಳ ಸಜ್ಜನಿಕೆಯ ವ್ಯಕ್ತಿತ್ವ ಸಾಮಾಜಿಕ ಕಳಕಳಿ, ನೊಂದವರ ಪರ ವಕಾಲತ್ತು ವಹಿಸುವ ಗುಣ ಅವರನ್ನು ಸದಾ ನೆನಪಿನಲ್ಲಿ ಇರುವಂತೆ ಮಾಡಿದೆ. ನನಗೆ ಮೊಣಪ್ಪನವರು ಹೆಚ್ಚಾಗಿ ಪರಿಚಯವಾಗಿದ್ದು ಕೊಡಗು ಏಕೀಕರಣ ರಂಗದಲ್ಲಿ ಅವರು ಅಧ್ಯಕ್ಷರಾಗಿದ್ದಾಗ ನಾನು ಏಕೀಕರಣ ರಂಗದ ಸದಸ್ಯನಾಗಿದ್ದೆ ಆ ಸಂದರ್ಭ ಅವರೊಂದಿಗೆ ಹಲವು ಹೋರಾಟಗಳಲ್ಲಿ ನಾನು ಭಾಗವಹಿಸಿದ್ದೆ. ಹೋರಾಟದ ಕಾರ್ಯಕ್ರಮಗಳಿಗೆ ನನ್ನ ನರ್ಮದಾ ಸ್ಕೂಟರ್ ನಲ್ಲಿ ಹಿಂಬದಿಯಲ್ಲಿ ಕುಳಿತು ಅವರೊಂದಿಗೆ…

Read More

ಮಡಿಕೇರಿ ಮಹಿಳಾ ದಸರಾ – ಸ್ಥಧಿ೯ಗಳು ಸ್ಥಳದಲ್ಲಿಯೇ ಅಕ್ಟೋಬರ್ 22ರಂದು ಹೆಸರು ನೋಂದಾಯಿಕೊಳ್ಳಲು ಆಹ್ವಾನ..

ವಿಜಯ ದರ್ಪಣ ನ್ಯೂಸ್  ಮಡಿಕೇರಿ ಅ.15- ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್ 22 ರಂದು ಭಾನುವಾರ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಮಹಿಳಾ ದಸರಾದ ವಿವಿಧ ಸ್ಪಧೆ೯ಗಳಿಗೆ ಸ್ಲಳದಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ. ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ಜಂಟಿ ಪ್ರಕಣೆಯಲ್ಲಿ ತಿಳಿಸಿದ್ದಾರೆ. ಅ.22 ರಂದು…

Read More

ಮಡಿಕೇರಿ ದಸರಾ ಅಲಂಕಾರ ಸ್ಪರ್ಧೆಗಳಿಗೆ ಆಹ್ವಾನ

ವಿಜಯ ದರ್ಪಣ ನ್ಯೂಸ್ ಮಡಿಕೇರಿ ದಸರಾ ಅಲಂಕಾರ ಸ್ಪರ್ಧೆಗಳಿಗೆ ಆಹ್ವಾನ ಮಡಿಕೇರಿ ಅಕ್ಟೋಬರ್ 12: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಂಪ್ರದಾಯಿಕವಾಗಿ ನಡೆಯುತ್ತಿದು ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ನವರಾತ್ರಿ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ   ಅಕ್ಟೋಬರ್ 15 ರಂದು ಕರಗ ಸಾಗುವ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆ ಆಯೋಜಿತವಾಗಿದ್ದು ಚುಕ್ಕಿ,, ಪುಡಿ. ಎಳೆ.ಮತ್ತು ಪುಷ್ಪ ರಂಗೋಲಿ ವಿಭಾಗಗಳ ಸ್ಪರ್ಧೆಗಳು ಜರುಗಲಿದೆ. ಅಕ್ಟೋಬರ್ 23 ರಂದು ಆಯುಧ ಪೂಜೆ ಅಂಗವಾಗಿ…

Read More

ನೂರಾರು ಜೀವಗಳಿಗೆ ಆಶ್ರಯ ನೀಡಿದ್ದ ಜೀವಕ್ಕೆ ನುಡಿನಮನ…ಅನಿಲ್ ಎಚ್.ಟಿ.

ವಿಜಯ ದರ್ಪಣ ನ್ಯೂಸ್  ಮಡಿಕೇರಿ. ಕೊಡಗು ಜಿಲ್ಲೆಯ ಎಲ್ಲೇ ಆಗಲಿ.. ನಿಗ೯ತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು ಓಡಾಡುತ್ತಾ ಜನರ ಗಮನಕ್ಕೆ ಬಂದು ಇವರನ್ನು ಎಲ್ಲಿಗೆ ಸಾಗಿಸುವುದು.. ಇವರಿಗೆ ಹೇಗೆ ಆಶ್ರಯ ಕೊಡುವುದು ಎಂಬ ಪ್ರಶ್ನೆ ಎದುರಾದರೆ.. ಇಂಥ ಪ್ರಶ್ನೆಗೆ ದೊರಕುತ್ತಿದ್ದ ಉತ್ತರವೇ.. ವಿಕಾಸ್ ಜನಸೇವಾ ಟ್ರಸ್ಟ್ ನ ರಮೇಶ್.. ಕೆಲವು ವಷ೯ಗಳ ಹಿಂದಿನವರೆಗೂ ಸುಂಟಿಕೊಪ್ಪದ ಗದ್ದೆಹಳ್ಳದ ರಸ್ತೆಬದಿಯಲ್ಲಿನ ಪುಟ್ಟ ಮನೆಯೊಂದರಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ಮೂಲಕ ನಿಗ೯ತಿಕರು, ಅನಾಥರ ಸೇವೆ ಮಾಡುತ್ತಿದ್ದ ರಮೇಶ್ ಎಂಬ ಸಹೖದಯಿ ನಂತರ…

Read More

ಜನಾಗ್ರಹ ಚಳುವಳಿಗೆ ಎಐಟಿಯುಸಿ ಕಟ್ಟಡ ಕಾರ್ಮಿಕ ಸಂಘಟನೆ ಬೆಂಬಲ.

ವಿಜಯ ದರ್ಪಣ ನ್ಯೂಸ್ ಮಡಿಕೇರಿ ಜಿಲ್ಲೆ, ಸಿದ್ದಾಪುರ ಅಕ್ಟೋಬರ್ 02: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ 7/10/2023ರಂದು ಕರೆ ನೀಡಿರುವ ಜನಾಗ್ರಹ ಚಳುವಳಿಗೆ ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆಯು ಬೆಂಬಲ ವ್ಯಕ್ತಪಡಿಸಿದೆ. ಸಂಘದ ಕಛೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎಂ.ಎ ಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ತಮ್ಮ ಬೇಡಿಕೆಯನ್ನ ಮುಂದಿಟ್ಟುಕೊಂಡು ಚಳುವಳಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು . ಈಗಾಗಲೇ ಕಟ್ಟಡ ಮತ್ತು…

Read More

ತಕ್ಷಣವೇ ಅಭಿವೃದ್ಧಿ ನಿಗಮ ಜಾರಿಮಾಡಲು ಅದೇನು ತರಕಾರಿ ತಾಯಮ್ಮನ ಅಂಗಡಿಯಲ್ಲಿ ಸಿಗುವ ತರಕಾರಿಯೇ?

ವಿಜಯ ದರ್ಪಣ ನ್ಯೂಸ್ ಮಡಿಕೇರಿ: ಚುನಾವಣೆ ಪೂರ್ವದಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾದ ಪ್ರಣಾಳಿಕೆಯನ್ನು ಕಾಂಗ್ರೆಸ್ ಸಿದ್ದಪಡಿಸಿ ಅದನ್ನು ಎ.ಎಸ್ ಪೊನ್ನಣ್ಣ ನವರು ಬಿಡುಗಡೆ ಮಾಡಿದ್ದರು.ನಂತರ ಡಾ ಮಂತರ್ ಗೌಡ ರವರ ಪ್ರಣಾಳಿಕೆಯಲ್ಲಿ ಕೂಡ ಅವುಗಳಿಗೆ ಆದ್ಯತೆ ನೀಡಿದ್ದರು.ಒಟ್ಟು ಇಪ್ಪತ್ತೆಂಟು ಭರವಸೆಗಳಿದ್ದು ಅವುಗಳಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕೂಡ ಒಂದು. ಹಾಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಯ ಜವಾಬ್ದಾರಿ ಶಾಸಕದ್ವಯರ ಹೊಣೆಗಾರಿಕೆಯಾಗಿದೆ.ಅದನ್ನು ಖಂಡಿತವಾಗಿ ಅವರು ಮಾಡಲು ಸಿದ್ದರಿದ್ದು ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿದೆ. ಅಭಿವೃದ್ಧಿ ನಿಗಮ ಸ್ಥಾಪನೆ ಎನ್ನುವುದು…

Read More

ಹರೆಯದ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಬಹು ಮುಖ್ಯ: ಜಯಂತಿ ರೈ

ವಿಜಯ ದರ್ಪಣ ನ್ಯೂಸ್. ಆಡಿ ಬಾ ಎನ ಕಂದ ಅಂಗಾಲ ತೊಳೆದೆನಾ………..  ಎಂದು ಪುಟ್ಟ ಕಂದನಿಗೆ ನೆನ್ನೆ ಮೊನ್ನೆವರೆಗೆ ಹೇಳುತಿದ್ದ ಅಮ್ಮ ಈಗೀಗ ಆಡಲು ಬಿಡುತಿಲ್ಲ, ಹೆಚ್ಚಾಗಿ ಹೊರಗೆ ಸ್ನೇಹಿತರೊಂದಿಗೆ ಬೆರೆಯಲು ಬಿಡಲ್ಲ ಯಾಕೆ ಅಮ್ಮ ಈ ರೀತಿ ಬದಲಾದಳು? ಹೆತ್ತಮ್ಮನ ಮನದಲ್ಲಿ ಯಾರಿಗೂ ಹೇಳಿಕೊಳ್ಳಲಾಗದ ಅವ್ಯಕ್ತ ಭಯ ಆವರಿಸಿದೆ. ತನ್ನ ಕಂದ ಮನೆಯಿಂದ ಶಾಲೆ/ ಕಾಲೇಜಿಗೆ ಹೊರಟಾಗ ಕಣ್ಣಿಗೆ ಕಾಣದ ದೇವರಲ್ಲಿ ಕಣ್ತುಂಬಿಕೊಂಡು ಮೌನವಾಗಿ ಕೇಳಿಕೊಳ್ಳುವುದೊಂದೆ ಮಗು ಸುರಕ್ಷಿತವಾಗಿ ಮನೆಗೆ ಹಿಂತಿರುಗಿ ಬರಲೆಂದು. ಬಾಲ್ಯದಲ್ಲಿ ಮಕ್ಕಳು…

Read More

ಸಂಧ್ಯಾರಾಗ: ಜಯಂತಿ ರೈ.

ಸಂಧ್ಯಾರಾಗ ಬದುಕಿನ ಪಯಣದಲ್ಲಿ ಜೀವ ಸಂಕುಲ ವಯಸ್ಸಿನ ಪ್ರಭಾವಕ್ಕೆ ಒಳಗಾಗುವುದು ಸೃಷ್ಟಿಯ ನಿಯಮ. ಹುಟ್ಟು ಸಾವಿನ ಜೀವನ ಚಕ್ರದಲ್ಲಿ ವೃದ್ಧಾಪ್ಯದ ಕಾಲಘಟ್ಟವನ್ನು ದಾಟಿಯೇ ಮುಂದೆ ಸಾಗಬೇಕು. ಮಧ್ಯ ವಯಸ್ಸಿನವರೆಗೂ ಕಾಡದ ಅನೇಕ ಸಮಸ್ಯೆಗಳಾದ ಏಕಾಂಗಿತನ , ಅಭದ್ರತೆ , ಭಯ , ಆಸರೆಯ ಅಗತ್ಯತೆ , ತನ್ನಂತಾನೇ ಹಿರಿಯ ನಾಗರಿಕರಲ್ಲಿ ತಲೆದೋರುತ್ತದೆ. ಮಕ್ಕಳು ಮುಪ್ಪಿನಲ್ಲಿ ಆಧಾರವಾಗುವರೆಂದು ಪ್ರೀತಿಯಿಂದ ಬೆಳೆಸಿ ತಮ್ಮ ಕಷ್ಟಗಳಿಂದ ಮಕ್ಕಳು ನಲುಗಬಾರದೆಂಬ ದೃಷ್ಟಿಯಿಂದ ಬೆಳೆಸಿದ ಅನೇಕ ತಂದೆ ತಾಯಿಗಳಿಗೆ ಮುಪ್ಪಿನಲ್ಲಿ ಸಿಗುವುದಾದರೂ ಏನು? ….

Read More

ವೀರಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಶೀಘ್ರ ಪುನರ್ ಸ್ಥಾಪಿಸಿ: ಉದ್ಘಾಟನಾ ಫಲಕ ಸ್ತoಬ ಕೂಡ ಸ್ಮಾರಕದಂತೆ, ಸಂರಕ್ಷಿಸಲು ಅಧಿಕಾರಿಗಳಿಗೆ ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ.

ವಿಜಯ ದರ್ಪಣ ನ್ಯೂಸ್ ಮಡಿಕೇರಿ .ಆಗಸ್ಟ್ 25  ರಾಷ್ಟ್ರಕಂಡ ಮಹಾನ್ ಸೇನಾ ನಾಯಕ, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಯನ್ನು ಶೀಘ್ರ ಪುನರ್ ಸ್ಥಾಪಿಸಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಸ್ಥಳಾಂತರಿಸಲಾಗಿರುವ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಮಾಜಿ ಸಚಿವ ಎಂ.ಸಿ.ನಾಣಯ್ಯ ಹಾಗೂ ಸ್ಥಳೀಯ ಶಾಸಕ ಡಾ.ಮಂತರ್ ಗೌಡ…

Read More

ಮಡಿಕೇರಿ ನಗರದಲ್ಲಿ ಅನಧಿಕೃತ ಮಳಿಗಳ ನಿರ್ಮಾಣ : ಕಣ್ಮುಚ್ಚಿ ಕುಳಿತ ನಗರಸಭೆ.

ವಿಜಯ ದರ್ಪಣ ನ್ಯೂಸ್ ಮಡಿಕೇರಿ , ಆಗಸ್ಟ್ 20  ಮಡಿಕೇರಿ ನಗರದ ಚಿಕ್ಕಪೇಟೆಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಹಳೆಯ ಮರ್ಕರ ಕ್ಲಿನಿಕ್ ಜಾಗದಲ್ಲಿ ಈಗ ನೂತನವಾಗಿ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಮಳಿಗಳಿಗೆ ಕೇವಲ ಒಂದು ವರ್ಷಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹಾಗಿದ್ದರೂ ಇಲ್ಲಿ ನಿರ್ಮಾಣ ಆಗುತ್ತಿರುವ ವ್ಯಾಪಾರ ಮಳಿಗೆಗಳ ನಿರ್ಮಾಣದ ತಂತ್ರಜ್ಞಾನ ನೋಡಿದರೆ ಕಾಯಂ ಮಾಡಿದ ರೀತಿ ಕಾಣುತ್ತಿದೆ. ಈ ಮಳಿಗೆಗಳ ನಿರ್ಮಾಣದ ಸಮಯದಲ್ಲಿ ನಗರ ಸಭೆ ವತಿಯಿಂದ ಕೇವಲ 6 ಮಳಿಗೆಗಳಿಗೆ…

Read More