ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ಸೈಯೆಂಟ್ ಡಿಎಲ್ಎಮ್

ವಿಜಯ ದರ್ಪಣ ನ್ಯೂಸ್  ಬೆಂಗಳೂರು, ಡಿಸೆಂಬರ್ 14, 2023: ಸಂಯೋಜಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಯಾದ ಸೈಯೆಂಟ್ ಡಿಎಲ್ಎಮ್, ಬೆಂಗಳೂರಿನಲ್ಲಿ ಹೊಸ ಪ್ರಿಶಿಸನ್ ಮಶಿನಿಂಗ್ ಸೌಲಭ್ಯವನ್ನು ಉದ್ಘಾಟಿಸುವುದಾಗಿ ಘೋಷಿಸಿದೆ. ಈ ಸೌಲಭ್ಯವು ಪ್ರಸ್ತುತ ವರ್ಷಕ್ಕೆ 60,000 ಗಂಟೆಗಳ ಸಾಮರ್ಥ್ಯವನ್ನು ಹೊಂದಿದೆ, 20 ಅತ್ಯಾಧುನಿಕ ಯಂತ್ರಗಳ ಸೇರ್ಪಡೆಯೊಂದಿಗೆ ಸಾಮರ್ಥ್ಯವನ್ನು ವರ್ಷಕ್ಕೆ 180,000 ಗಂಟೆಗಳವರೆಗೆ ಹೆಚ್ಚಿಸಲು 3x ವಿಸ್ತರಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ಸೌಲಭ್ಯವು 36,000 ಚದರ ಅಡಿ ಉತ್ಪಾದನಾ ಪ್ರದೇಶವನ್ನು ಹೊಂದಿದ ಸೈಯೆಂಟ್ ಡಿಎಲ್ಎಮ್ ಸಿಎನ್ಸಿ ಯಂತ್ರದಲ್ಲಿ ಹೆಚ್ಚಿನ ನಿಖರತೆಯೊಂದಿಗೆ ವಾಯುಯಾನ,…

Read More

ಬೆಂಗಳೂರಿನಲ್ಲಿ ಮೂರು ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್‌ಗಳನ್ನು ತೆರೆದ ಯಮಹಾ

ವಿಜಯ ದರ್ಪಣ ನ್ಯೂಸ್  ಬೆಂಗಳೂರು ಬೆಂಗಳೂರಿನಲ್ಲಿ ಮೂರು ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್‌ಗಳನ್ನು ತೆರೆದ ಯಮಹಾ – ಈಗ, ಯಮಹಾ ಕರ್ನಾಟಕ ಮಾರುಕಟ್ಟೆಯಲ್ಲಿ 20 ವಿಶೇಷ ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಹೊಂದಿದೆ ಬೆಂಗಳೂರು, ಕರ್ನಾಟಕ, ಡಿಸೆಂಬರ್ 08, 2023: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಇಂದು ಕರ್ನಾಟಕದಲ್ಲಿ ಮೂರು ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್‌ಗಳ (ಶೋರೂಮ್‌ಗಳ) ಉದ್ಘಾಟನೆಯನ್ನು ಘೋಷಿಸಿದೆ. ಕೆಆರ್ ಪುರಂನಲ್ಲಿ 8,945 ಚದರ ಅಡಿ ವಿಸ್ತಾರದ ‘ಐ ಆಟೋಮೊಬೈಲ್ಸ್ ಪ್ರೈ….

Read More

ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ…..

ವಿಜಯ ದರ್ಪಣ ನ್ಯೂಸ್ ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ….. ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ…….. ಚುನಾವಣೆಯನ್ನು ಮೌಲ್ಯಗಳ ಮೇಲೆ ಅಳೆಯಬೇಕೆ, ಸಂಖ್ಯೆಗಳ ಮೇಲೆ ಅಳೆಯಬೇಕೆ, ಫಲಿತಾಂಶಗಳ ಮೇಲೆ ಅಳೆಯಬೇಕೆ, ಅಧಿಕಾರ ವಹಿಸಿಕೊಂಡರ ಸಾಮರ್ಥ್ಯದ ಮೇಲೆ ಅಳೆಯಬೇಕೆ ಒಮ್ಮೆ ಮುಕ್ತವಾಗಿ ಆಲೋಚಿಸಿ. ಇದು ವಿದೇಶದ ಶತ್ರುಗಳ ಮೇಲಿನ ವಿಜಯವಲ್ಲ. ನಮ್ಮ ನಡುವಿನ ಒಂದು ಸಣ್ಣ ಸ್ಪರ್ಧೆ ಮಾತ್ರ…. ಇಲ್ಲಿಯವರೆಗೆ…

Read More

ಎರಡು ಸುದ್ದಿಗಳ ಸುತ್ತಾ…..

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಎರಡು ಸುದ್ದಿಗಳ ಸುತ್ತಾ….. ಅರ್ಜುನ ಎಂಬ ಆನೆಯ ಸಾವು, ಮತ್ತು ಶ್ರೀಮತಿ ಭವಾನಿ ರೇವಣ್ಣ ಅವರ 1.5 ಕೋಟಿಯ ಕಾರು……… ಕಳ್ಳರನ್ನು ಹಿಡಿಯುವ ಪೋಲೀಸರ ಕಾರ್ಯಾಚರಣೆಯಲ್ಲಿ ಪೋಲೀಸರೇ ಹತ್ಯೆಯಾದಂತಾಗಿದೆ ಅರ್ಜುನನ ಸಾವು. ಬಹುಶಃ ಖೆಡ್ಡಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯದಿಂದ ಅರ್ಜು‌ನನ ಸಾವು ಸಂಭವಿಸಿರುವ ಎಲ್ಲಾ ಸಾಧ್ಯತೆಗಳು ಇವೆ. ಒಂದಕ್ಕೊಂದು ಭಿನ್ನ ವರದಿಗಳು ಬರುತ್ತಿವೆ. ಸರ್ಕಾರ ಒಂದು ತಟಸ್ಥ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿದರೆ ಸತ್ಯ…

Read More

ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲಿರುವ ಡ್ರೈವರ್ ಲಾಜಿಸ್ಟಿಕ್ಸ್

ವಿಜಯ ದರ್ಪಣ ನ್ಯೂಸ್ ,ಬೆಂಗಳೂರು ಡ್ರೈವರ್ ಲಾಜಿಸ್ಟಿಕ್ಸ್ ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ · ಸರಕು ಸಾಗಣೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಪ್ರತಿಜ್ಞೆ · ಥಾಯ್ಲೆಂಡ್ ಮೂಲಕ ಆಗ್ನೇಯ ಏಷ್ಯಾದಲ್ಲಿಯೂ ಕಾರ್ಯಾಚರಣೆ ಆರಂಭ ಬೆಂಗಳೂರು, 04 ಡಿಸೆಂಬರ್ 2023: ಡ್ರೈವರ್ ಲಾಜಿಸ್ಟಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸರಕು ಸಾಗಣೆ ಸೇವಾ ಸಂಸ್ಥೆ, ಕರ್ನಾಟಕದಲ್ಲಿ ತನ್ನ ಬಹುಗ್ರಾಹಕ ಉಗ್ರಾಣ ಮತ್ತು ಭಾಗಶಃ ಟ್ರಕ್ ಲೋಡ್ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಶ್ರೀ…

Read More

” ಡೀಪ್ ಪೇಕ್ ” ( Deep fake ) ಎಂದರೇನು ?…

ವಿಜಯ ದರ್ಪಣ ನ್ಯೂಸ್ ಬೆಂಗಳೂರು ” ಡೀಪ್ ಪೇಕ್ ” ( Deep fake ) ಎಂದರೇನು ?… ಇದೊಂದು ಗ್ರಾಫಿಕ್ ಅನಿಮೇಷನ್‌ ರೀತಿಯ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕಲೆ…….. ಇದರ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಹ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಆತಂಕಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಾಕಷ್ಟು ಜನ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ…. ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಗಾಗಿ ಒಂದಷ್ಟು ಸಾಮಾನ್ಯ ಮಾಹಿತಿ…. ಡೀಪ್ ಪೇಕ್ ಎಂಬ ಪದದ ಕನ್ನಡ…

Read More

ಕದನ ವಿರಾಮವೆಂಬ ಅರಿವಿಲ್ಲದ ನಾಟಕ…..

ವಿಜಯ ದರ್ಪಣ ನ್ಯೂಸ್  ಬೆಂಗಳೂರು ಕದನ ವಿರಾಮವೆಂಬ ಅರಿವಿಲ್ಲದ ನಾಟಕ….. ಸುಮಾರು ‌15000 ಜನ ಸತ್ತು, ನೂರಾರು ಮಕ್ಕಳು ಮಹಿಳೆಯರು ಗಾಯಗೊಂಡು, ಅನೇಕರು ಅನಾಥರಾದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಘೋಷಣೆಯಾಗಿದೆ. ನಾಲ್ಕು ದಿನದ ನಂತರ ಯುದ್ಧ ಮುಂದುವರಿಯುತ್ತದೆ ಅಥವಾ ಇನ್ನೊಂದಿಷ್ಟು ದಿನ ಕದನ ವಿರಾಮ ಜಾರಿಯಲ್ಲಿರಬಹುದು. ಹಮಾಸ್ ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ಕೆಲವು ಬಂಧಿಗಳನ್ನು ಬಿಡುಗಡೆ ಮಾಡಿದೆ….. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಸಾವಿರಾರು ಜನರ…

Read More

” ಸಂವಿಧಾನ ” ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವ……. ನವೆಂಬರ್ 26…

ವಿಜಯ ದರ್ಪಣ ನ್ಯೂಸ್ ” ಸಂವಿಧಾನ “ ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವ……” ಸಂವಿಧಾನ “ ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವ……. ನವೆಂಬರ್ 26… ಕಾನೂನು ದಿನ – ಈಗ – ಸಂವಿಧಾನ ದಿನ………… ಸಂವಿಧಾನ ಎಂದರೇನು ? ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ? ನೀತಿ ನಿಯಮಗಳೇ ? ಬದುಕೇ ? ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ? ನಾಗರಿಕ ಮಾನದಂಡಗಳೇ ?…

Read More

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…..,

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಸೃಷ್ಟಿಯ ಸಹಜತೆ ಮತ್ತು ವಿಸ್ಮಯ….., ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ…. ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು…. ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆಯಾಗಿರಬಹುದು ಅಥವಾ ಆತ್ಮಹತ್ಯೆಗೆ ಶರಣಾದರು……. ಬೃಹತ್ ದೇಶದ ಬಲಿಷ್ಠ ಪ್ರಧಾನಿ ಇಂದಿರಾಗಾಂಧಿ ಅಂಗರಕ್ಷಕರ ಗುಂಡಿಗೆ ಬಲಿಯಾದರು… ಆಧ್ಯಾತ್ಮದ ಮೇರು ಶಿಖರ, ಕಾಳಿ ಮಾತೆಯೊಂದಿಗೆ ಸಂಪರ್ಕ ಸಾಧಿಸಿದ್ದರು ಎಂದು ಹೇಳಲಾದ ರಾಮಕೃಷ್ಣ ಪರಮಹಂಸರು ಗಂಟಲು ಕ್ಯಾನ್ಸರ್‌ ಗೆ ಬಲಿಯಾದರು……

Read More

ಜಾತಿ ಜನಗಣತಿ……

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಜಾತಿ ಜನಗಣತಿ…… ಜಾತಿ ಪದ್ದತಿಯ ಶಾಪ ವಿಮೋಚನೆಯೇ ? ಜಾತಿ ವ್ಯವಸ್ಥೆಯ ಅಧೀಕೃತಗೊಳಿಸುವಿಕೆಯೇ? ಸಾಮಾಜಿಕ ನ್ಯಾಯವೇ ? ರಾಜಕೀಯ ಪ್ರೇರಿತವೇ ? ಚುನಾವಣಾ ತಂತ್ರಗಾರಿಕೆಯೇ ? ಇದು ಸರಿಯೇ ಅಥವಾ ತಪ್ಪೇ ?….. ನೇರ ಉತ್ತರ ಸುಲಭ ಮತ್ತು ಸರಳ. ಇದರಿಂದ ಲಾಭವಾಗುವವರಿಗೆ ಸರಿ ನಷ್ಟವಾಗುವವರಿಗೆ ತಪ್ಪು….. ಜನರ, ಸಮಾಜದ, ದೇಶದ ಭವಿಷ್ಯದ ದೃಷ್ಟಿಯಿಂದ ಆಳವಾಗಿ ಮತ್ತು ಸಮಗ್ರವಾಗಿ ಯೋಚಿಸಿ ನಂತರ ಈ ಕ್ಷಣದ ವಾಸ್ತವ ಮತ್ತು ಸತ್ಯದ ಅಭಿಪ್ರಾಯ ರೂಪಿಸಿಕೊಳ್ಳಬೇಕು….

Read More