ಸಕಾರಾತ್ಮಕ ಮನೋಭಾವ ಸ್ವ ಉದ್ಯೋಗಕ್ಕೆ ಅಡಿಪಾಯ: ಸಾಧನಾ ಫೋಟೆ.
ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ, ಬೆಂಗಳೂರು ಗ್ರಾ ಜಿಲ್ಲೆ. ಜುಲೈ 19 ಮನುಷ್ಯನ ಪ್ರತಿ ಬೇಡಿಕೆಗೂ ಮಾರುಕಟ್ಟೆ ಲಭ್ಯವಿದ್ದು, ಕಲೆ ಕೌಶಲ್ಯಗಳನ್ನು ರೂಢಿಸಿಕೊಂಡು, ಕೌಶಲ್ಯಗಳಿಗೆ ಅನುಸಾರವಾಗಿ ಸ್ವಯಂ ಉದ್ಯೋಗ ಆರಂಭಿಸಬೇಕು. ಉದ್ಯಮಶೀಲ ವ್ಯಕ್ತಿಯಾಗಬಯಸುವವರಿಗೆ, ಸ್ವ ಉದ್ಯೋಗಕ್ಕೆ, ಸಕಾರಾತ್ಮಕ ಧೋರಣೆಯೇ ಅಡಿಪಾಯವೆಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉದ್ಯೋಗ ವಿಭಾಗದ ರಾಜ್ಯ ಜಂಟಿ ನಿರ್ದೇಶಕಿ ಶ್ರೀಮತಿ ಸಾಧನಾ ಪೋಟೆ ಅವರು ತಿಳಿಸಿದರು. ನೆಲಮಂಗಲ ತಾಲ್ಲೂಕು ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಮೊಬೈಲ್…