ಡೆಂಗಿ ಜ್ವರ, ಚಿಕನ್ ಗುನ್ಯ ಬಗ್ಗೆ ಭಯಬೇಡ: ಡಾ.ಸುನೀಲ್ ಕುಮಾರ್
ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 22 :- ಸೋಂಕಿತ ಈಡೀಸ್ ಸೊಳ್ಳೆಯು ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರವಾದ ಹೊಟ್ಟೆನೋವು, ಮೈ-ಕೈ-ನೋವು, ವಾಕರಿಕೆ, ವಾಂತಿ ಇವುಗಳ ಜೊತೆ ತೀವ್ರವಾದ ಹೊಟ್ಟೆನೋವು, ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಗಂಧೆಗಳು, ವಿಪರೀತ ಬಾಯಾರಿಕೆ, ಜ್ಞಾನ ತಪ್ಪುವುದು ಇನ್ನಿತರ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಯಾವುದೇ ಜ್ವರ ಲಕ್ಷಣಗಳು ಕಂಡು ಬಂದಲ್ಲಿ…