ಜಾನಪದವೆಂಬ ತಾಯಿ ಬೇರಿನ ನೀರು ಜೀವವಾಹಿನಿ
ವಿಜಯ ದರ್ಪಣ ನ್ಯೂಸ್ ಮಂಡ್ಯ ಜಾನಪದ ಜಗತ್ತಿನ ಎಲ್ಲ ಸಾಹಿತ್ಯ ಪ್ರಕಾರಗಳ ತಾಯಿಬೇರು ಎಂಬುದು ಕ್ಲೀಷೆಯ ವಿಚಾರವಾಗಿದ್ದರೂ ಪದೇ ಪದೇ ಅದೇ ವಿಚಾರವನ್ನು ನೆನಪಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ತಾಯಿಬೇರಿನ ನೀರು ಕುಡಿದೇ ನಲಿಯುತ್ತಿರುವ ನಾವು ಮರಳಿ ಆ ಮೂಲಕ್ಕೆ ಹೋಗಿಯೇ ಅನುಭವಿಸಬೇಕು ಎಂದು ಜಾನದಪ ವಿದ್ವಾಂಸ ಎಂ. ಬೈರೇಗೌಡ ನುಡಿದರು. ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಗರದ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ…