ಮಾಧ್ಯಮಗಳು ವರ್ಣಿಸಿದ ವರ್ಣರಂಜಿತ ರಾಜಕಾರಣಿಯ ಬದುಕು ನನ್ನಲ್ಲಿ ಮೂಡಿಸಿದ ಭಾವ ಲಹರಿ……..
ವಿಜಯ ದರ್ಪಣ ನ್ಯೂಸ್….. ಮಾಧ್ಯಮಗಳು ವರ್ಣಿಸಿದ ವರ್ಣರಂಜಿತ ರಾಜಕಾರಣಿಯ ಬದುಕು ನನ್ನಲ್ಲಿ ಮೂಡಿಸಿದ ಭಾವ ಲಹರಿ…….. ಕೆಲವರ ಬದುಕಿನಲ್ಲಿ ಆಯಸ್ಸು, ಅಂತಸ್ತು, ಅಧಿಕಾರ, ಅದೃಷ್ಟ, ಹಣ, ಯಶಸ್ಸು ಎಲ್ಲವೂ ಒಟ್ಟಿಗೇ ಸಿಗುತ್ತದೆ ಎಂಬುದನ್ನು ಅವರ ಬದುಕಿನ ಇತಿಹಾಸವನ್ನು ನೋಡಿದಾಗ ಅನಿಸುತ್ತದೆ. ಅಂತಹವರಲ್ಲಿ ಒಬ್ಬರು ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಜನಿಸಿ, ಆಗಿನ ಕಾಲಕ್ಕೆ ಅತ್ಯಂತ ಶ್ರೀಮಂತರು, ವಿದ್ಯಾವಂತರು, ಪ್ರಭಾವಶಾಲಿಗಳಿಗೆ ಮಾತ್ರ ಸಾಧ್ಯವಾಗಬಹುದಾಗಿದ್ದ ವಿದೇಶದ ಪ್ರತಿಷ್ಠಿತ…