ಮಕ್ಕಳನ್ನೇ ಕೊಲ್ಲುವ ಮರ್ಯಾದೆ ಹತ್ಯೆಗಳು,

ವಿಜಯ ದರ್ಪಣ ನ್ಯೂಸ್…. ಸಂಸ್ಕೃತಿ – ವಿಕೃತಿ….. ಆದರ್ಶ ಮತ್ತು ವಾಸ್ತವ…. ಮಕ್ಕಳನ್ನೇ ಕೊಲ್ಲುವ ಮರ್ಯಾದೆ ಹತ್ಯೆಗಳು, ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜೈಲಿಗೆ ಹೋಗುವ ಸಂಬಂಧಿಗಳೇ ಧೀರರು – ಗೌರವಸ್ತರು – ಮರ್ಯಾದಸ್ತರು, ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿ ಪ್ರದರ್ಶಿಸಿ ವರದಕ್ಷಿಣೆಯನ್ನು ಕೊಡುವವರು ತಮ್ಮ ಮನೆತನದ ಹೆಚ್ಚುಗಾರಿಕೆ – ಗೌರವ ಕಾಪಾಡುವ ಮಾನಸ್ಥರು, ಹಣ – ಹೆಂಡ ಹಂಚಿ – ತಲೆಹಿಡಿದು ಟಿಕೆಟ್ ಗಿಟ್ಟಿಸಿ – ಚುನಾವಣೆಯಲ್ಲಿ ಗೆದ್ದು ರಾಜಕೀಯ…

Read More

ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ…….

ವಿಜಯ ದರ್ಪಣ ನ್ಯೂಸ್…. ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ……. ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿದ, ಪ್ರಾಮಾಣಿಕ ಹಣ ಯಾವುದಕ್ಕೂ ಸಾಲುತ್ತಿಲ್ಲ….. ಹೀಗೊಂದು ವಾಸ್ತವ ಬದುಕು ಮತ್ತು ಚಿಂತನೆ ಹಲವರ ಗೊಣಗಾಟಕ್ಕೆ ಕಾರಣವಾಗಿದೆ……. ಆಧ್ಯಾತ್ಮಿಕ, ಧಾರ್ಮಿಕ, ಆದರ್ಶ ಚಿಂತನೆಗಳ ಹಿನ್ನೆಲೆಯನ್ನು ಹೊರತುಪಡಿಸಿ, ಸಹಜ ಸಾಮಾನ್ಯ ವ್ಯಾವಹಾರಿಕ ಜಗತ್ತಿನಲ್ಲಿ, ಈ ದೇಶದಲ್ಲಿ, ಬಡವರು, ಕೆಳ ಮಧ್ಯಮ ವರ್ಗದವರು ಮತ್ತು ಮಧ್ಯಮ ವರ್ಗದವರು ಖಂಡಿತವಾಗಲೂ ಕಷ್ಟಪಟ್ಟು ದುಡಿದ ಹಣದಲ್ಲಿ ಬದುಕುವುದು ತುಂಬಾ ಕಷ್ಟ. ಹಾಗೆ ಬದುಕಲೇ ಬೇಕಾದ ಸಂಕಲ್ಪ…

Read More

ಪ್ರೀತಿಯಿಂದ ಪ್ರೀತಿಗಾಗಿ, ಪ್ರೀತಿಯ ಭಾವದ ಆಳ ಅಗಲ…….

ವಿಜಯ ದರ್ಪಣ ನ್ಯೂಸ್… ಪ್ರೀತಿಯಿಂದ ಪ್ರೀತಿಗಾಗಿ, ಪ್ರೀತಿಯ ಭಾವದ ಆಳ ಅಗಲ…… ಫೆಬ್ರವರಿ 14 – valentines day….. ಪ್ರೇಮಿಗಳ ದಿನ……. ಹಾಗೆಯೇ ಅದು ಪೋಷಕರ ತಳಮಳದ ದಿನವೂ ಹೌದು, ತಂದೆ ತಾಯಿಗಳ ಪಶ್ಚಾತ್ತಾಪದ ದಿನವೂ ಹೌದು….. ಆದರೆ ಇಲ್ಲಿ ಪ್ರೇಮಿಗಳ ಮನಃ ಪರಿವರ್ತನೆಯ ಕ್ಷಣವೂ, ಪೋಷಕರ ಕ್ಷಮಾ ದಿನವೂ ಒಟ್ಟಿಗೆ ನಡೆಯುವ ಸಾಧ್ಯತೆಯ ಒಂದು ಅಂತರಾಳದ ಪತ್ರ……… ಪ್ರೀತಿಯ ಆಳ, ತಂದೆ ತಾಯಿಗಳ ಸೆಳೆತದ ಆಳ, ಮಕ್ಕಳ ಮೇಲಿನ ಮೋಹದ ಆಳ, ಬದುಕಿನ ಕ್ಷಣಿಕತೆಯ ಅನುಭವ,…

Read More

ರೈತ ಜಾಗೃತಿ ಮತ್ತು ಪ್ರೊಫೆಸರ್ ಎಂ. ಡಿ. ನಂಜುಂಡಸ್ವಾಮಿ……

ವಿಜಯ ದರ್ಪಣ ನ್ಯೂಸ್…… ರೈತ ಜಾಗೃತಿ ಮತ್ತು ಪ್ರೊಫೆಸರ್ ಎಂ. ಡಿ. ನಂಜುಂಡಸ್ವಾಮಿ…… ಪ್ರತಿಭಟನೆಗಳು – ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ, ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರನ್ನು ಅವರ ಜನ್ಮದಿನದ – ಫೆಬ್ರವರಿ 13 – ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ…. ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ ಹೆಸರು ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರದು….. ರೈತ ಹೋರಾಟಕ್ಕೆ ತನ್ನ ಸಮಕಾಲೀನರ ಜೊತೆ ಸೇರಿ ಸಂಘಟನಾತ್ಮಕ ಧ್ವನಿ ನೀಡಿದ ಕೀರ್ತಿ ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ….. ರಾಜಕೀಯ ಆಡಳಿತಗಾರರು,…

Read More

ಚಾಲಕರೆಂಬ ಮಧ್ಯವರ್ತಿ ಜೀವಂತ ವಾಹನಗಳು ಮತ್ತು ಮಾಧ್ಯಮಗಳು ಹಾಗು ಚಾಲನೆ ಎಂಬ ಕಲೆ……….

ವಿಜಯ ದರ್ಪಣ ನ್ಯೂಸ್…. ಚಾಲಕರೆಂಬ ಮಧ್ಯವರ್ತಿ ಜೀವಂತ ವಾಹನಗಳು ಮತ್ತು ಮಾಧ್ಯಮಗಳು ಹಾಗು ಚಾಲನೆ ಎಂಬ ಕಲೆ………. ಇಡೀ ದೇಶದಲ್ಲಿ ಅಥವಾ ವಿಶ್ವದಲ್ಲಿ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಈ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಟೆಲಿಫೋನ್, ಮೊಬೈಲ್, ಸಾಮಾಜಿಕ ಜಾಲತಾಣಗಳು ಮುಂತಾದ ಕೆಲವನ್ನು ಹೆಸರಿಸಲಾಗುತ್ತದೆ. ಆದರೆ ಅದರಷ್ಟೇ ಪ್ರಾಮುಖ್ಯತೆ ಪಡೆದು ಅದಕ್ಕಿಂತ ಪ್ರಮುಖವಾಗಿ ಇಡೀ ಜನ ಸಮೂಹವನ್ನು ಫಿಸಿಕಲಿ ಅಂದ್ರೆ ಭೌತಿಕವಾಗಿ ಒಗ್ಗೂಡಿಸುವುದು ಬೃಹತ್ ಸಂಪರ್ಕ ಜಾಲ ವ್ಯವಸ್ಥೆ ಹೊಂದಿರುವ ಚಾಲಕರು…

Read More

ಈ ಭೂಮಿಗೆ ಎಲ್ಲರೂ ವಲಸಿಗರೇ…….

ವಿಜಯ ದರ್ಪಣ ನ್ಯೂಸ್…. ಈ ಭೂಮಿಗೆ ಎಲ್ಲರೂ ವಲಸಿಗರೇ……. ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ ಬೇರೆ ದೇಶದ ಜನರನ್ನು ಆಚೆಗೆ ಅಟ್ಟುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಭಾರತದ 104 ಜನರನ್ನು ಬಂಧಿಸಿ ಕೈಗೆ ಕೋಳ ತೊಡಿಸಿ ಅವರದೇ ಸೈನಿಕ ವಿಮಾನದಲ್ಲಿ ಕರೆತಂದು ಭಾರತಕ್ಕೆ ಬಿಡಲಾಯಿತು. ಇದನ್ನು ನೋಡಿದಾಗ ಒಮ್ಮೆ ಕರುಳು ಚುರ್ ಎಂದಿತು. ನಿಜ, ಅಕ್ರಮ ಎಂಬ ಪದವೇ ಬಹುತೇಕ ಒಂದು ಅಪರಾಧ ಅಥವಾ ಮಾಡಬಾರದ ಕೆಲಸ ಅಥವಾ ಕಾನೂನಿನ…

Read More

ಉನ್ನತ ಶಿಕ್ಷಣದಲ್ಲಿ ಜಾತಿ ಮತ್ತು ಭ್ರಷ್ಟಾಚಾರ…….

ವಿಜಯ ದರ್ಪಣ ನ್ಯೂಸ್….. ಉನ್ನತ ಶಿಕ್ಷಣದಲ್ಲಿ ಜಾತಿ ಮತ್ತು ಭ್ರಷ್ಟಾಚಾರ……. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಕ್ಕಿಳಿದ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯಗಳು……   ಭಾರತದ ವಿಶ್ವವಿದ್ಯಾಲಯಗಳಿಗೆ ಐತಿಹಾಸಿಕ ಮಹತ್ವವಿದೆ. ಭಾರತದಲ್ಲಿ ಅಜ್ಞಾನ, ಅನಕ್ಷರತೆ ಬಹಳ ಹಿಂದಿನಿಂದಲೂ ತಾಂಡವವಾಡುತ್ತಿದ್ದರೂ, ಶೋಷಿತ ವರ್ಗಗಳನ್ನು ಶಿಕ್ಷಣದಿಂದ ದೂರ ಇಟ್ಟಿದ್ದರೂ, ಕೆಲವು ವರ್ಗಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿಯೇ ಇತ್ತು. ಗುರುಕುಲ ಶಿಕ್ಷಣದ ಜೊತೆಗೆ ಭಾರತದಲ್ಲಿ ಬಹಳ ಹಿಂದೆಯೇ ನಳಂದ, ತಕ್ಷಶಿಲಾ ಮುಂತಾದ ವಿಶ್ವವಿದ್ಯಾಲಯಗಳಿದ್ದವು. ಸ್ವಾತಂತ್ರ ಪೂರ್ವದಲ್ಲಿಯೇ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಸ್ವಾತಂತ್ರ್ಯ ನಂತರದಲ್ಲಿ…

Read More

ಸಾಧನೆಯ ಸಾಧನಗಳು

ವಿಜಯ ದರ್ಪಣ ನ್ಯೂಸ್…. ಸಾಧನೆಯ ಸಾಧನಗಳು ************** ಕ್ಷಮಿಸಿ, ಸ್ವಲ್ಪ ಧೀರ್ಘವಿದೆ. ಧ್ಯಾನಸ್ಥ ಮನಸ್ಥಿತಿಯಲ್ಲಿ ಓದಿದರೆ ಸಾಧನೆಗೆ ಗಂಭೀರ ಪರಿಣಾಮ ಬೀರಬಹುದು. ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ, ವ್ಯಾಪಾರ, ಉದ್ಯಮ, ವ್ಯವಸಾಯ, ಉದ್ಯೋಗ ಮುಂತಾದ ಬದುಕಿನ ಯಾವುದೇ ಕ್ಷೇತ್ರವಾಗಿರಲಿ ಅಥವಾ ಸಹಜ, ಸಾಮಾನ್ಯ ಮೌಲ್ಯಯುತ ಬದುಕೇ ಆಗಿರಲಿ, ಅಸಾಮಾನ್ಯ ಸಾಧನೆ ಅಥವಾ ಜನಪ್ರಿಯತೆಯ ಸಾಧನೆ ಅಥವಾ ಅಧಿಕಾರ ಸಾಧನೆ ಅಥವಾ ಆತ್ಮ ತೃಪ್ತಿಯ ಸಾಧನೆ ಯಾವುದೇ ಆಗಿರಲಿ, ಅದಕ್ಕಾಗಿ ಕೆಲವು ಸಾಧನಗಳು ಅಸ್ತ್ರಗಳಂತೆ ಇವೆ….

Read More

ಬಜೆಟ್ – ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ..

ವಿಜಯ ದರ್ಪಣ ನ್ಯೂಸ್… ಬಜೆಟ್ – ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ.. ಕನಸು ಕಣ್ಗಳಿಂದ ನೋಡುತ್ತಾಲೇ ಇದ್ದಾನೆ ಭಾರತದ ಬಡ – ಮಧ್ಯಮ ವರ್ಗದ ಪ್ರಜೆ 1950 ರಿಂದ ಇಲ್ಲಿಯವರೆಗೂ, ಪ್ರತಿ ವರ್ಷದ ಕೇಂದ್ರ ಮತ್ತು ರಾಜ್ಯದ ಬಜೆಟ್ ಅನ್ನು, ನಿರೀಕ್ಷಿಸುತ್ತಲೇ ಇದ್ದಾನೆ ಈ ಬಾರಿಯಾದರೂ ನಾನು ಶ್ರೀಮಂತನಾಗಬಹುದು, ಈ ಬಾರಿಯಾದರೂ ನಾನು ನೆಮ್ಮದಿಯಿಂದ ಇರಬಹುದು, ಈ ಬಾರಿಯಾದರೂ ನನ್ನ ಬದುಕು ಹಸನಾಗಬಹುದೆಂದು…… ಮತ್ತದೇ ನಿರಾಸೆ, ಮತ್ತದೇ ನೋವು, ಮತ್ತದೇ ಆಸಹಾಯಕತೆ, ಮತ್ತದೇ ಆಕ್ರೋಶ, ಮತ್ತದೇ…

Read More

ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ “

ವಿಜಯ ದರ್ಪಣ ನ್ಯೂಸ್ “ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ “ ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್ ಅವರ ಮಾತುಗಳಿವು. ಆ ಅನುಭವದ ಅನಿಸಿಕೆಯ ಹಿನ್ನೆಲೆಯಲ್ಲಿ…… ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ….

Read More