ನಗುತಿರು ಕಹಿ ನೆನಪುಗಳ ಮರೆತು
ಜಯಶ್ರೀ ಜೆ. ಅಬ್ಬಿಗೇರಿ ’ಸವಿ ಸವಿ ನೆನಪು ಸಾವಿರ ನೆನಪು.’ ಎನ್ನುವ ಗೀತೆಯ ಸಾಲುಗಳನ್ನು ಗುನುಗದವರು ತುಂಬಾ ಕಡಿಮೆ. ಪ್ರತಿಯೊಬ್ಬರಿಗೂ ಮರೆಯದೆ ಮೆಲುಕು ಹಾಕುವ ನೂರಾರು ನೆನಪುಗಳು ಇರುತ್ತವೆ. ’ಸವಿ ನೆನಪುಗಳು ಬೇಕು ಸವಿಯಲೇ ಬದುಕು’ ಎಂಬ ಹಾಡನ್ನು ಕೇಳದವರು ವಿರಳ. ನನಗೆ ಈ ಸಂದರ್ಭದಲ್ಲಿ ದೇಜಗೌ ಅವರು ಅನುವಾದಿಸಿದ ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ ’ನೆನಪು ಕಹಿಯಲ್ಲ’ ಶೀರ್ಷಿಕೆ ನೆನಪಿಗೆ ಬರುತ್ತಿದೆ. ಬದಲಾಗುವ ಜನರ ನಡುವೆ ಬದಲಾಗದೆ ಉಳಿಯುವ ನೆನಪುಗಳೇ ಶಾಶ್ವತ. ನೆನಪುಗಳಿಗೆ ಸಂದರ್ಭ…