ನಾವು ಭಾರತೀಯರು……
ವಿಜಯ ದರ್ಪಣ ನ್ಯೂಸ್… ನಾವು ಭಾರತೀಯರು…… ಚುನಾವಣಾ ಫಲಿತಾಂಶದ ನಂತರ ನಮ್ಮ ತಿಳಿವಳಿಕೆ – ನಡವಳಿಕೆ ಮತ್ತು ಪ್ರತಿಕ್ರಿಯೆ ಹೇಗಿರಬೇಕು…… ನಾಳೆ ಭಾರತ ದೇಶದ ಲೋಕಸಭೆಯ 545 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶ ಏನೇ ಇರಲಿ, ಯಾರೇ ಅಧಿಕಾರಕ್ಕೆ ಬರಲಿ ದಯವಿಟ್ಟು ಪಕ್ಷಗಳ ಕಾರ್ಯಕರ್ತರು ಮತ್ತು ಮತದಾರರು ಈ 72 ದಿನಗಳ ಚುನಾವಣಾ ಪ್ರಚಾರದ ಭಾಷಣಗಳು, ವಿರೋಧಗಳು, ದ್ವೇಷ ಅಸೂಯೆಗಳು ಎಲ್ಲವನ್ನು ಮರೆತುಬಿಡಿ……. ಗೆದ್ದವರು ತಣ್ಣಗೆ ಸಂಭ್ರಮ ಆಚರಿಸಿ, ಸೋತವರನ್ನು ತೀರಾ ಕೆಟ್ಟದಾಗಿ ನಡೆಸಿಕೊಳ್ಳಬೇಡಿ, ಟೀಕಿಸಬೇಡಿ….