ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ……

ವಿಜಯ ದರ್ಪಣ ನ್ಯೂಸ್ ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ…… ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿತ್ತು. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿತ್ತು. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ ಇಂದು ವಿಶೇಷ ಭಾವನೆಗಳನ್ನು ಉಕ್ಕಿಸುತ್ತಿತ್ತು. ದೇಹ ಮನಸ್ಸು ಹಗುರಾದಂತೆ ಅನಿಸುತ್ತಿತ್ತು. ಇಷ್ಟು ವರ್ಷಗಳ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಈ ಅನುಭವ, ಈ ಭಾವ. ಅದಕ್ಕೆ ಕಾರಣವೂ ಇದೆ… ನನಗೆ ಅಪ್ಪ ಅಮ್ಮ ಎಂದರೆ…

Read More

ಅದೇ ಭೂಮಿ ಅದೇ ಬಾನು.-ಈ ಪಯಣ ನೂತನ” ಪ್ರೇಮ ಲಹರಿ :ಜಯಶ್ರೀ.ಜೆ. ಅಬ್ಬಿಗೇರಿ

ವಿಜಯ ದರ್ಪಣ ನ್ಯೂಸ್  “ಅದೇ ಭೂಮಿ ಅದೇ ಬಾನು.-ಈ ಪಯಣ ನೂತನ” ಪ್ರೇಮ ಲಹರಿ, ಜಯಶ್ರೀ.ಜೆ. ಅಬ್ಬಿಗೇರಿ  ಮನದಲ್ಲಿ ಮುಗಿಲೆತ್ತರದ ಆಸೆಗಳನ್ನಿಟ್ಟುಕೊಂಡು ಇಂದಲ್ಲ ನಾಳೆ ನಿನ್ನ ಹೃದಯವೆಂಬ ನೆಲದಲ್ಲಿ ಪ್ರೀತಿಯ ಹೂವು ಅರಳುತ್ತದೆಂದು ಕಾದದ್ದೇ ಬಂತು ಕಾಯುವುದರಲ್ಲೂ ಅದೇನೋ ಸವಿಯಾದ ಸುಖವಿದೆ. ಆ ಸವಿನೆನಪುಗಳ ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು. ಕಾಡುವುದೇ ನೆನಪುಗಳ ಕೆಲಸ. ಅವುಗಳ ಕಾಡುವಿಕೆಯಲ್ಲೂ ಏನೋ ಒಂದು ಹಿತವಿದೆ ಅನಿಸುತ್ತೆ. ಅದರಲ್ಲೂ ನಿನ್ನ ನೆನಪುಗಳಲ್ಲಿ ಮುಗಿಯದ ಸೆಳೆತವಿದೆ. ನೆನಪುಗಳಲ್ಲಿ ಅಷ್ಟೇ ಅಲ್ಲ ನಿನ್ನಲ್ಲೂ. ಎಲ್ಲೂ…

Read More

ಜೀವಿಸುವುದೇ ಒಂದು ಸಾಧನೆ ಎಂಬ ಅರ್ಥದ ಕಡೆಗೆ ವಿಶ್ವದ ಜನರ ಪಯಣ…….

ವಿಜಯ ದರ್ಪಣ ನ್ಯೂಸ್  ಜೀವಿಸುವುದೇ ಒಂದು ಸಾಧನೆ ಎಂಬ ಅರ್ಥದ ಕಡೆಗೆ ವಿಶ್ವದ ಜನರ ಪಯಣ……. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ತೆಲುಗು ಭಾಷಿಕರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದು ಉದ್ದೇಶ ಪೂರ್ವಕವೇ ಅಥವಾ ಆಕಸ್ಮಿಕವೇ ಅಥವಾ ಯಾವುದೋ ಅಸಮಾಧಾನದ ಪ್ರತಿರೂಪವೇ ಅಥವಾ ಅದಕ್ಕಿಂತ ಹೆಚ್ಚು ಅರ್ಥ ಹೊಂದಿದೆಯೇ…. ಸುಮಾರು 30 ವರ್ಷಗಳ ಹಿಂದೆ ಭಾರತೀಯ ಸಮಾಜದಲ್ಲಿ ವಿದೇಶದಲ್ಲಿ ಓದುವುದು, ಉದ್ಯೋಗ – ವ್ಯವಹಾರ ಮಾಡುವುದು, ವಿದೇಶ ಪ್ರವಾಸ ಮಾಡುವುದು,…

Read More

ಬದುಕೇನು ಭಾರವಲ್ಲ ಅನುಭವಿಸಿ…….

ವಿಜಯ ದರ್ಪಣ ನ್ಯೂಸ್  ಬದುಕೇನು ಭಾರವಲ್ಲ ಅನುಭವಿಸಿ……. ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರು ಸಲ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶೋಷಣೆಗೊಳಗಾಗಿದ್ದೇನೆ, ಈ ಬದುಕು ಸಾಕೆನಿಸುವಷ್ಟು ನೊಂದಿದ್ದೇನೆ, ಜೀವನದಲ್ಲಿ ಮತ್ತೆಂದೂ ಮೇಲೇರಲು ಸಾಧ್ಯವಾಗದಷ್ಟು ಸೋತಿದ್ದೇನೆ, ಸಮಾಜದ ಯಾರೂ ಗಮನಿಸದಷ್ಟು ಅಲಕ್ಷಿತನಾಗಿದ್ದೇನೆ, ಇಲ್ಲಿಯವರೆಗೂ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ದೇನೆ, ಅನಾಥ ಪ್ರಜ್ಞೆ ಹಗಲಿರುಳು ಕಾಡುತ್ತಾ ಬಸವಳಿದಿದ್ದೇನೆ, ಆದರೂ,………….. ಬದುಕನ್ನು ಎದುರಿಸುತ್ತಿದ್ದೇನೆ, ಈ ಕ್ಷಣಕ್ಕೂ ನಗು ನಗುತಲಿದ್ದೇನೆ, ಮತ್ತೆ ಮತ್ತೆ…

Read More

ನೆಲಮಾಳಿಗೆಯಲ್ಲಿನ ಒಂದಷ್ಟು ಬದುಕು…..

ವಿಜಯ ದರ್ಪಣ ನ್ಯೂಸ್ ನೆಲಮಾಳಿಗೆಯಲ್ಲಿನ ಒಂದಷ್ಟು ಬದುಕು……. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬದುಕಿನ ಅತ್ಯಂತ ನೋವಿನ ಘಟನೆಗಳಿಗೆ ಸಾಕ್ಷಿಯಾಗಿರುವ ನಮ್ಮ ಸಮಕಾಲೀನ ಸಂದರ್ಭದಲ್ಲಿ ಒಂದು ನೋಟ…… ಕೇಳಲು, ಓದಲು ಹಿಂಸೆಯಾದರೆ ಕ್ಷಮೆಇರಲಿ…… ರಸ್ತೆ ಬದಿಯಲ್ಲಿ ಅನಾಥರಂತೆ ಸಾಯುವ ಮಾಹಿತಿಯೇ ಇಲ್ಲದ ಬಹಳಷ್ಟು ಜನರು ಇನ್ನೂ ಈ ಸಮಾಜದಲ್ಲಿ ಇದ್ದಾರೆ…… ತನ್ನ ಕುಟುಂಬದವರ ಎರಡೊತ್ತಿನ ಊಟಕ್ಕಾಗಿ ದಿನನಿತ್ಯ 5/6 ಜನರಿಗೆ ತನ್ನ ಮುದಿ ದೇಹವನ್ನು ಮಾರಿಕೊಳ್ಳುವ ಮಹಿಳೆಯರು ಈಗಲೂ ಇದ್ದಾರೆ…… ಇನ್ನೂ ಟಿವಿ ಮೊಬೈಲ್‌ ಅಕ್ಷರ ಜ್ಞಾನ ತಿಳಿಯದ…

Read More

ಪತ್ರಕರ್ತರ ಕಿವಿಗೆ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಇಟ್ಟಂತ ಹೂವನ್ನು ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ಮರು ಮುಡಿಸುವರೇ.

ವಿಜಯ ದರ್ಪಣ ನ್ಯೂಸ್ ಪತ್ರಕರ್ತರ ಕಿವಿಗೆ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಇಟ್ಟಂತ ಹೂವನ್ನು ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ಮರು ಮುಡಿಸುವರೇ. ಬೆಂಗಳೂರು: 2024ರ ಫೆಬ್ರವರಿ 3ಮತ್ತು 4ರಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳು ಚರ್ಚೆಗೆ ಕಾರಣವಾಗಿದೆ. ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಮೌಢ್ಯಬಿತ್ತುವ ಪಟ್ಟಭದ್ರರ ವಿರುದ್ಧ ನಿಷ್ಠುರವಾಗಿರಬೇಕು. ಪ್ರಜಾಪ್ರಭುತ್ವ…

Read More

ಗೋಕುಲಾಷ್ಟಮಿಗು ಇಮಾಮ್ ಸಾಬಿಗೂ ಸಂಬಂಧ ಕಲ್ಪಿಸಿಕೊಟ್ಟ ಕವಿ.

ಗೋಕುಲಾಷ್ಟಮಿಗು ಇಮಾಮ್ ಸಾಬಿಗೂ ಸಂಬಂಧ ಕಲ್ಪಿಸಿಕೊಟ್ಟ ಕವಿ. ‘ಉತ್ಥಾನ’ ಮಾಸಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದ ದಿನಗಳವು. ತಿಂಗಳಿಗೆ ಸರಿ ಸುಮಾರು ೧೬೦೦ ರೂ ಸಂಬಳದ ನನಗೆ ಬೆಂಗಳೂರು ಮತ್ತು ಬೆಂಗಳೂರಿಗೆ ನಾನು ಅಪ್ಪಟ ಅಪರಿಚಿತರೇ ಬಿಡಿ. ಬೆಂಗಳೂರು ನನ್ನ ಪಾಲಿಗೆ ಅಗಾಧ ವಸ್ತು-ವಿಷಯ-ವ್ಯಕ್ತಿಗಳನ್ನು ಒಡಲೊಳಗಿಟ್ಟು ಕೊಂಡ ಮಾಯಾಗೋಳದಂತೆಯೇ ಭಾಸವಾಗುತ್ತಿದ್ದುದೂ ಕೂಡ ಇದೇ ಬೆಂದಕಾಳೂರು. ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇಂಥಹ ಬೆಂಗಳೂರು ಎಂಬ ಊರು ಹಾಗೆ ಸೂರಿಲ್ಲದ ಎಲ್ಲರನ್ನು ತಳ ಊರಲು ಬಿಡುವುದೂ ಇಲ್ಲ ಎಂಬ ಸತ್ಯದ ನಡುವೆ ಸಿಕ್ಕದ್ದು…

Read More

ಮಾವು ಬೆಳೆಯನ್ನು ರೋಗದಿಂದ ಸಂರಕ್ಷಿಸುವ ವಿಧಾನ

ವಿಜಯ ದರ್ಪಣ ನ್ಯೂಸ್ ಮಾವು ಬೆಳೆಯನ್ನು ರೋಗದಿಂದ ಸಂರಕ್ಷಿಸುವ ವಿಧಾನ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 2 : ಮಾವಿನ ಬೆಳೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಡಿಸೆಂಬರ್ ಮಾಹೆಯಿಂದ ಪ್ರಾರಂಭವಾಗಿ ಫೆಬ್ರವರಿ ಮಾಹೆಯ ಅಂತ್ಯದವರೆಗೂ ಸಹ ಹೂ ಬಿಡುವ ಪ್ರಕ್ರಿಯೆ ಕಾಣ ಬರುತ್ತದೆ. ಹೂ ಬಿಡುವ ಅವಧಿಯಲ್ಲಿ ಉಪದ್ರವ ಕೀಟಗಳಾದ ಜಿಗಿಹುಳು, ಹೂತೆನೆ/ಕುಡಿ ಕೊರಕ, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ, ಓಟೆ ಕೊರಕ ಹಾಗೂ ರೋಗಗಳಾದ ಹೂತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ…

Read More

ಸಂವಿಧಾನ ಪೀಠಿಕೆ: ಮುಂಗಾಣ್ಕೆಯ ಕನ್ನಡಿ 

ವಿಜಯ ದರ್ಪಣ ನ್ಯೂಸ್ ಸಂವಿಧಾನ ಪೀಠಿಕೆ: ಮುಂಗಾಣ್ಕೆಯ ಕನ್ನಡಿ  ಭಾರತದ ಸಂವಿಧಾನವು ಒಂದು ಪುಟ್ಟ ಪೀಠಿಕೆಯಿಂದ ಆರಂಭವಾಗುತ್ತದೆ. ಇದು ನಮ್ಮ ಪ್ರಾಚೀನ ಕಾವ್ಯಗಳ ನಾಂದಿ ಪದ್ಯದಂತಿದೆ. ಕಾರಣ, ಅಲ್ಲಿ ಮೊದಲು ಪದ್ಯವು ಇಡೀ ಕಾವ್ಯದ ಆಶಯವನ್ನು ಹೇಳುತ್ತದೆ- ಹನಿ ಇಡೀ ಹೊಳೆಯ ಬಗ್ಗೆ ಹೇಳುವಂತೆ. ಅದರಂತೆ, ಸದರಿ ಪೀಠಿಕೆಯು ಸಂವಿಧಾನದ ಆಶಯವನ್ನು ಮಾತ್ರವಲ್ಲದೆ, ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನೇ ಮುಂದಿಡುತ್ತದೆ. ಎಂತಲೇ ಇದನ್ನು ಬಾಬಾಸಾಹೇಬರು ‘ಭಾರತದ ಭವಿಷ್ಯದ ಜೀವನವಿಧಾನದ ಕನ್ನಡಿ’ ಎಂದು ಬಣ್ಣಿಸಿದರು. ಪೀಠಿಕಾ ಪುಟವನ್ನು ಶಾಂತಿನಿಕೇತನದ ಕಲಾವಿದ…

Read More

ಸಮಾಜ ಸುಧಾರಣೆಯ ಇತಿಹಾಸ ಮತ್ತು ವರ್ತಮಾನ, ಭವಿಷ್ಯದ ದೃಷ್ಟಿಯಿಂದ…..

ವಿಜಯ ದರ್ಪಣ ನ್ಯೂಸ್. ಸಮಾಜ ಸುಧಾರಣೆಯ ಇತಿಹಾಸ ಮತ್ತು ವರ್ತಮಾನ, ಭವಿಷ್ಯದ ದೃಷ್ಟಿಯಿಂದ….. ಸಮಾಜ ಸೇವೆ ಅಥವಾ ಸುಧಾರಣೆ ಎಂದರೇನು ? ನಿಜವಾದ ಸಮಾಜ ಸುಧಾರಕರು ಯಾರು ? ಯಾವ ರೀತಿಯಿಂದ ಸಮಾಜ ಸುಧಾರಣೆ ಸಾಧ್ಯ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದಾಗ………. ಹಿಂದೆ ದಾರ್ಶನಿಕರು, ಚಿಂತಕರು, ಆಧ್ಯಾತ್ಮಿಕ ಜೀವಿಗಳು, ತತ್ವಜ್ಞಾನಿಗಳು ಮುಂತಾದವರು ತಮ್ಮ ದೇಹ ಮನಸ್ಸುಗಳ ದಂಡನೆ, ಅಧ್ಯಯನ, ತಪಸ್ಸು, ಯೋಗ, ಧ್ಯಾನ, ನಿರಂತರ ಪ್ರವಾಸ, ವಾದ, ಚರ್ಚೆ, ಮಂಥನ ಮುಂತಾದ ಕ್ರಮಗಳಿಂದ ತಮ್ಮ…

Read More