ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,…………..

ವಿಜಯ ದರ್ಪಣ ನ್ಯೂಸ್…. ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,………….. ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು, ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ, ಆ ದೇಶದಲ್ಲಿ ಚಲಿಸುವ ಬುಲೆಟ್ ರೈಲುಗಳ ವೇಗ, ಅಲ್ಲಿ ಇರಬಹುದಾದ…

Read More

ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ…..

ವಿಜಯ ದರ್ಪಣ ನ್ಯೂಸ್….. ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ….. ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ……… ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ. ವಕೀಲಿಕೆ ಎಂದರೆ, ತಾವು ಮಾಡುವ ಕೆಲಸಗಳನ್ನು ದಾಖಲೆಗಳ ಸಮೇತ ನಿರೂಪಿಸುವ ಅಥವಾ ಸಮರ್ಥಿಸಿಕೊಳ್ಳುವ ಒಂದು ವಿಧಾನ. ಸಾಮಾನ್ಯವಾಗಿ ಒಳ್ಳೆಯ ಕೆಲಸಗಳಲ್ಲಿ ವಕೀಲಿಕೆಯ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಅದನ್ನು ನಿರೂಪಿಸುವುದು ಹೆಚ್ಚು ಕಷ್ಟವಲ್ಲ….

Read More

ಹಾಲಿನಿಂದ ಆಲ್ಕೋಹಾಲಿನತ್ತಾ ಬದಲಾವಣೆ……..

ವಿಜಯ ದರ್ಪಣ ನ್ಯೂಸ್…. ಹಾಲಿನಿಂದ ಆಲ್ಕೋಹಾಲಿನತ್ತಾ ಬದಲಾವಣೆ…….. ಕೃಷಿ ಭೂಮಿಯನ್ನೂ ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 75000 ರೂಪಾಯಿಗೂ ಹೆಚ್ಚು ಇದೆಯಂತೆ……. 500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ . ಆದರೆ ಈಗ ಕೆಲವೇ ವರ್ಷಗಳಲ್ಲಿ 8000 ರೂಪಾಯಿ ತಲುಪಿದೆ…….. ಸಣ್ಣ ಕಟ್ಟಡಗಳ, ವಿಶಾಲ ಮೈದಾನದಲ್ಲಿ ಹಸಿರು…

Read More

ಕರ್ನಾಟಕದಲ್ಲಿ ಇಸ್ರೇಲ್ ಮಹಿಳೆಯ ಮೇಲಿನ ಅತ್ಯಾಚಾರ……..

ವಿಜಯ ದರ್ಪಣ ನ್ಯೂಸ್…. ಕರ್ನಾಟಕದಲ್ಲಿ ಇಸ್ರೇಲ್ ಮಹಿಳೆಯ ಮೇಲಿನ ಅತ್ಯಾಚಾರ…….. ಸಾರ್ವಜನಿಕರೇ, ಇದು ನಿಮ್ಮ ಹೆಸರಿಗೂ ಕಳಂಕ ಎಂಬುದನ್ನು ಮರೆಯದಿರಿ…….. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಪ್ಲೇ ಹೋಂ ಅಥವಾ ರೆಸಾರ್ಟ್ ನಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಒಬ್ಬ ವ್ಯಕ್ತಿಯ ಕೊಲೆಯಾಗಿದೆ. ಆ ಹೆಣ್ಣು ಮಕ್ಕಳಲ್ಲಿ ಒಬ್ಬರು ಇಸ್ರೇಲ್ ನಾಗರಿಕರು ಎಂಬುದು ಮತ್ತಷ್ಟು ಗಾಬರಿ ಹಾಗೂ ಆತಂಕಕಾರಿ ವಿಷಯ….. ನಿಜಕ್ಕೂ ಕರ್ನಾಟಕ ತಲೆತಗ್ಗಿಸುವಂತಹ ವಿಷಯವಿದು. ರನ್ಯಾ ಎಂಬ ಮಾಜಿ ಸಿನಿಮಾ ನಟಿಯ ಚಿನ್ನದ…

Read More

ಹೋಳಿ ಮತ್ತು ಮಾನವೀಯ ಮೌಲ್ಯ………

ವಿಜಯ ದರ್ಪಣ ನ್ಯೂಸ್…. ಹೋಳಿ ಮತ್ತು ಮಾನವೀಯ ಮೌಲ್ಯ……… ನಾಳೆ ನಾಡಿದ್ದು ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ….. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ ಚಿತ್ತಾರದ ನಡುವೆ ಮನುಷ್ಯ ಸಂಬಂಧಗಳ ಬೆಸೆಯುವಿಕೆಯ ಹುಡುಕಾಟ ಸಹ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಯೋಚಿಸುತ್ತಾ…… ಪ್ರೀತಿಯೆಂಬ ಬಣ್ಣ ತುಂಬಿ ಪ್ರೇಮವೆಂಬ ರಂಗು ಮೂಡಲಿ. ಕರುಣೆಯೆಂಬ ಬಣ್ಣ ತುಂಬಿ…

Read More

ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ…….

ವಿಜಯ ದರ್ಪಣ ನ್ಯೂಸ್….. ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ…………. ದೇಶ ಕಾಯುವ ಸೈನಿಕ ದೇವರೇ ? ದೇಹ ಕಾಯುವ ವೈದ್ಯ ದೇವರೇ ? ಅನ್ನ ಬೆಳೆಯುವ ರೈತ ದೇವರೇ ? ವಿದ್ಯೆ ನೀಡುವ ಶಿಕ್ಷಕ ದೇವರೇ ? ಹುಟ್ಟಿಸುವ ತಂದೆ ದೇವರೇ ? ಜನ್ಮ ನೀಡುವ ತಾಯಿ ದೇವರೇ ? ಊಟ ಬಡಿಸುವ ಭಟ್ಟ ದೇವರೇ ? ಅವಶ್ಯ ಇರುವ ಸ್ಥಳಕ್ಕೆ ತಲುಪಿಸುವ ಚಾಲಕ ದೇವರೇ ? ವಕೀಲ ದೇವರೇ ? ಪೋಲೀಸ್ ದೇವರೇ…

Read More

ಶೀ ವಿಕ್ಟರಿ ವೀರೇಶ್ ಮತ್ತು ಶ್ರೀ ಅಯ್ಯಪ್ಪ ಭಜಂತ್ರಿ……

ವಿಜಯ ದರ್ಪಣ ನ್ಯೂಸ್  ಮನದಾಳದ ಮಾತುಗಳು….. ಶೀ ವಿಕ್ಟರಿ ವೀರೇಶ್ ಮತ್ತು ಶ್ರೀ ಅಯ್ಯಪ್ಪ ಭಜಂತ್ರಿ…… ಸಾಮಾಜಿಕ ಜಾಲತಾಣಗಳ ಮುಖಾಂತರ ಏಳೆಂಟು ವರ್ಷಗಳ ಹಿಂದೆ ನನಗೆ ಪರಿಚಯವಾದವರು ದೃಶ್ಯ ಕಾಣದ ದಿವ್ಯಾಂಗ ಚೇತನರಾದ ಶ್ರೀ ವಿಕ್ಟರಿ ವೀರೇಶ್ ಅವರು. ಪ್ರಾರಂಭದಲ್ಲಿ ನನಗೂ ಆಶ್ಚರ್ಯವಾಯಿತು, ನಮ್ಮ ಬರಹಗಳನ್ನು ಹೇಗೆ ಓದುತ್ತಾರೆ ಎಂದು. ಆದರೆ ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಅವರ ಓದು, ಬರಹ, ಮಾತುಕತೆ, ಸಂವಾದ, ಸಂವೇದನಾಶೀಲತೆ ಎಲ್ಲವೂ ಸಹಜವಾಗಿ ನಮ್ಮಂತೆಯೇ ಇರುತ್ತದೆ ಎಂದು ತಿಳಿದು ತುಂಬಾ ಸಂತೋಷವಾಯಿತು….

Read More

ಸೌಜನ್ಯ…….

ವಿಜಯ ದರ್ಪಣ ನ್ಯೂಸ್…. ಸೌಜನ್ಯ……. ಮತ್ತೆ ಎದ್ದು ಬಂದ ಧರ್ಮಸ್ಥಳದ ನತದೃಷ್ಟ ಹೆಣ್ಣು ಮಗು ಸೌಜನ್ಯ……… ಸೌಜನ್ಯ ಸೃಷ್ಟಿಸಿರುವ ತ್ರಿಶಂಕು ಸ್ಥಿತಿ……. ” ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು ” ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ…. ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ಇತ್ತೀಚಿನ ವರ್ಷಗಳ ಅತ್ಯಂತ ವಿಶೇಷ ಪ್ರಕರಣ. ಬಹುಶಃ ನಿಜವಾದ ಅಪರಾಧಿ ಪತ್ತೆಯಾದರೆ ಅತ್ಯಂತ ಘೋರ ಅಪರಾಧಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆ…

Read More

ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ – 8…

ವಿಜಯ ದರ್ಪಣ ನ್ಯೂಸ್…. ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ – 8… ” ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ ” ” ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು ” ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು…… ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿರುವ ಭಾರತೀಯ ಸಂಸ್ಕೃತಿಯ ಮತ್ತೊಂದು ಮುಖದ ಅನಾವರಣವನ್ನು ಈ ಜಾನಪದ ಸಾಹಿತ್ಯ ಮಾಡುತ್ತದೆ. ಬಹುಶಃ ಜಾಗತೀಕರಣಕ್ಕೆ ಭಾರತ ಮುಕ್ತವಾಗಿರದಿದ್ದರೆ…

Read More

ಪ್ರಶ್ನೆ – ಉತ್ತರ – ನಮ್ಮ ಆತ್ಮಸಾಕ್ಷಿ…….

ವಿಜಯ ದರ್ಪಣ ನ್ಯೂಸ್….. ಪ್ರಶ್ನೆ – ಉತ್ತರ – ನಮ್ಮ ಆತ್ಮಸಾಕ್ಷಿ……. ಅಂಕಲ್, ” ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ” ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ? ಆಂಟಿ, ” ಮದ್ಯಪಾನದಿಂದ ಮನೆಗಳು ಸರ್ವನಾಶ ಆಗುತ್ತದೆ. ದೇಹ ರೋಗಗಳ ಗೂಡಾಗುತ್ತದೆ ” ಎಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಹೇಳುತ್ತಾರೆ. ಆದರೂ ಪ್ರತಿ ಬೀದಿಗಳಲ್ಲೂ…

Read More