ಪ್ರಯತ್ನ ಮಾತ್ರ ನಮ್ಮದು…
ವಿಜಯ ದರ್ಪಣ ನ್ಯೂಸ್.. ಪ್ರಯತ್ನ ಮಾತ್ರ ನಮ್ಮದು ಹಿಂದಿಗಿಂತ ಇಂದು ಬದುಕು ತರಹೇವಾರಿಯಾಗಿ ತೆರೆದುಕೊಳ್ಳುತ್ತಿದೆ. ಇಂದಿನ ಜನ ಜೀವನ ಕಂಡಾಗ ಸೌಕರ್ಯ ಹೆಚ್ಚಿದ್ದರೂ ನೋವು ಕಡಿಮೆಯಾಗಿಲ್ಲ. ನಲಿವು ಎಲ್ಲೋ ಅವಿತುಕೊಂಡು ಕುಳಿತಿದೆ. ಎಂದೆನಿಸುತ್ತದೆ. ಯಾವಾಗಲೋ ಒಮ್ಮೆ ಸಂತೋಷವು ಕಿಟಕಿಯಲ್ಲಿ ಇಣುಕಿ ನೋಡಿ ಜಾಗ ಖಾಲಿ ಮಾಡುತ್ತಿದೆ. ಹೀಗಾಗಿ ನೆಮ್ಮದಿ ಗಗನ ಕುಸುಮವೆನಿಸುತ್ತಿದೆ. ಇದಕ್ಕೆ ಕಾರಣ ವಿಧಿಯಾಟ ಹಣೆಬರಹ ಎಂದು ಹೆಸರಿಟ್ಟು ಕಣ್ಣೊರೆಸಿಕೊಳ್ಳುತ್ತ ಕೈ ಚೆಲ್ಲಿ ಕುಳಿತಿರುವುದೇ ಆಗಿದೆ. ಜಗದ ಪ್ರತಿಯೊಂದು ಆಗು ಹೋಗುಗಳನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ…