ಕಪಟ ನಾಟಕ ಸೂತ್ರಧಾರಿಗಳ ಭ್ರಷ್ಟಾಚಾರ………
ವಿಜಯ ದರ್ಪಣ ನ್ಯೂಸ್…… ಕಪಟ ನಾಟಕ ಸೂತ್ರಧಾರಿಗಳ ಭ್ರಷ್ಟಾಚಾರ……… ಸುಮಾರು 30 ವರ್ಷಗಳ ಕರ್ನಾಟಕದ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸವನ್ನು ನೋಡಿದರೆ ಯಾವುದೇ ಪಕ್ಷದ ಯಾವ ಸರ್ಕಾರ ಬಂದರೂ ಭ್ರಷ್ಟಾಚಾರ ಮಾತ್ರ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಭ್ರಷ್ಟಾಚಾರ ಪರ್ಸೆಂಟೇಜ್ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ…. ಪ್ರತಿ ಸರ್ಕಾರಗಳಲ್ಲೂ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಡೀ ವ್ಯವಸ್ಥೆ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ. ಅದು ಎಷ್ಟು ಸಹಜವಾಗಿದೆ ಎಂದರೆ, ಸಾಮಾನ್ಯರ ಮನಸ್ಸು ಭ್ರಷ್ಟಾಚಾರದ ವಿಷಯದಲ್ಲಿ ಸಂವೇದನೆಯನ್ನೇ…