ಮಲೆನಾಡುಗಿಡ್ಡ ಈ ಗೋತಳಿಯ ಮೌಲ್ಯವರ್ಧನೆ ಮಾಡಿದೆ ಕೊರೊನಾ!
ವಿಜಯ ದರ್ಪಣ ನ್ಯೂಸ್… ಮತ್ತೆ ಮುನ್ನೆಲೆಗೆ ಮಲೆನಾಡುಗಿಡ್ಡ ಈ ಗೋತಳಿಯ ಮೌಲ್ಯವರ್ಧನೆ ಮಾಡಿದೆ ಕೊರೊನಾ! ಕೋವಿಡ್ ಲಾಕ್‌ಡೌನ್ ನಂತರದಲ್ಲಿ ಜಾನುವಾರುಗಳ ಸಾಗಾಣಿಕೆಯಲ್ಲಿ ದಿಡೀರ್ ಏರಿಕೆಯಾಗಿದೆ. ಹೈನುಗಾರಿಕೆಗಾಗಿ ಹಸು, ಎಮ್ಮೆಗಳ ಕೊಡುಕೊಳ್ಳುವಿಕೆ, ತತ್ಸಂಬಂಧದ ಸಾಗಾಟ ಸಾಮಾನ್ಯವಾದರೂ ಕೊರೊನಾ ಕಾರಣದಿಂದ ನಾಡಿನ ಒಂದು ಗೋತಳಿಗೆ ಏಕಾಏಕಿ ಬೇಡಿಕೆ ಸೃಷ್ಟಿಯಾಗಿರುವುದು ಅನಿರೀಕ್ಷಿತವಷ್ಟೇ ಅಲ್ಲ ವಿಶೇಷ ಕೂಡ. ಕಳೆದ ವರ್ಷ ಎಲ್ಲರೂ ಹೆಚ್ಚು ಚರ್ಚೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕಾಯಿಲೆಗೆ ಬ್ರೇಕ್ ಹಾಕುವುದಕ್ಕೆ ಸಂಬಂಧಿಸಿದ ವಿಷಯ. ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಹೊರಳುವುದರ…