ಸಾಹಿತ್ಯ ಪರಂಪರೆಯನ್ನು ನೆಲಮೂಲ ಸಂಸ್ಕೃತಿಯ ವಕ್ತಾರ ತತ್ವಪದಕಾರರು ಪುನರ್ ನಿರ್ಮಿಸಿಕೊಟ್ಟರು: ಕಾ.ತ. ಚಿಕ್ಕಣ್ಣ.
ವಿಜಯ ದರ್ಪಣ ನ್ಯೂಸ್….. ಸಾಹಿತ್ಯ ಪರಂಪರೆಯನ್ನು ನೆಲಮೂಲ ಸಂಸ್ಕೃತಿಯ ವಕ್ತಾರರಾದ ತತ್ವಪದಕಾರರು ಪುನರ್‌ನಿರ್ಮಿಸಿಕೊಟ್ಟರು: ಕಾ.ತ.ಚಿಕ್ಕಣ್ಣ. ತತ್ವಪದ ಪರಂಪರೆ ಕನ್ನಡ ನಾಡಿನ ದಾರ್ಶನಿಕ ಪರಂಪರೆಯಲ್ಲಿ ಬಹುಮುಖ್ಯ ಧಾರೆಯಾಗಿದೆ. ಹದಿನೆಂಟು ಹತ್ತೊಂಬತ್ತನೇ ಶತಮಾನದಲ್ಲಿ ಶೂನ್ಯಾವಸ್ಥೆ ತಲುಪಿದ್ದ ಸಾಹಿತ್ಯ ಪರಂಪರೆಯನ್ನು ನೆಲಮೂಲ ಸಂಸ್ಕೃತಿಯ ವಕ್ತಾರರಾದ ತತ್ವಪದಕಾರರು ಪುನರ್‌ನಿರ್ಮಿಸಿಕೊಟ್ಟರು. ಅನಕ್ಷರಸ್ಥರಾಗಿದ್ದರೂ ಅವರ ಆಶಯ ಸಮಾಜ ಮುಖಿಯಾಗಿತ್ತು ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ನುಡಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ…