ದೇಹವೇ ದೇಗುಲ…….
ವಿಜಯ ದರ್ಪಣ ನ್ಯೂಸ್…. ದೇಹವೇ ದೇಗುಲ……. ದೇವರೆಂದರೇ, ಅರಿಶಿಣ ಕುಂಕುಮ ಹೂವು, ದೇವಸ್ಥಾನ ಕೆತ್ತಿದ ಮೂರ್ತಿ, ಹೋಮ ಹವನ ಅಕ್ಷತೆ ಮಂತ್ರ, ದೀರ್ಘ ದಂಡ ನಮಸ್ಕಾರ, ನಿಂಬೆಹಣ್ಣು ಹಾಲುತುಪ್ಪಗಳ ಸಮರ್ಪಣೆ ಅಷ್ಟೇನೇ…… ದೇವರಿಂದರೇ, ಮಂದಿರ ಮಸೀದಿ ಚರ್ಚು, ನಮಾಜು ಗಡ್ಡ ಟೋಪಿ ಕ್ರಾಸು, ಪ್ರಾರ್ಥನೆ ಹಬ್ಬಗಳ ಆಚರಣೆ ಇಷ್ಟೇನೇ,….. ದೇವರೆಂದರೇ, ಪ್ರಕೃತಿಯ, ಸಮಾಜದ, ಬದುಕಿನ ಎಲ್ಲಾ ಆಗುಹೋಗುಗಳಿಗೆ ಯಾರೋ ಒಬ್ಬರನ್ನ ಹೊಣೆ ಮಾಡಿ ಸಮಾಧಾನಪಟ್ಟು, ಅದನ್ನು ಅನುಭವಿಸುತ್ತಾ ಯಾವುದೋ ನೆಪದಲ್ಲಿ ಮುನ್ನಡೆಯುತ್ತಾ, ಅಂತಿಮ ಯಾತ್ರೆ ಮುಗಿಸುವುದು ಅಷ್ಟೇನೇ………