ಸಾಹಿತ್ಯ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ :ಸಾಹಿತಿ ನಾಟಕಕಾರ ಡಾ.ನಾ.ದಾಮೋದರಶೆಟ್ಟಿ
ವಿಜಯ ದರ್ಪಣ ನ್ಯೂಸ್ ಬೆಂಗಳೂರು ನವೆಂಬರ್ 20:ಸಾಹಿತ್ಯ ಮನುಷ್ಯಕೇಂದ್ರಿತ ನೆಲೆಯಲ್ಲಿ ತನ್ನನ್ನು ತಾನು ಅರಳಿಸಿಕೊಳ್ಳುವ ಸಾಧನ. ಅದು ಪೂರ್ವನಿರ್ಧರಿತ ಮಾದರಿಯಲ್ಲಿಯೇ ಇರಬೇಕೆಂಬ ಕಟ್ಟುಪಾಡುಗಳಿಲ್ಲ. ಬದಲಾವಣೆ ಜಗದ ನಿಯಮ ಎನ್ನುವಂತೆ ಈ ಸೂತ್ರ ಕಥಾರಚನೆಗೂ ಅನ್ವಯಿಸುತ್ತದೆ. ಹಾಗಾಗಿ ಕತೆಗೊಂದು ಆರಂಭ, ಮಧ್ಯದಲ್ಲಿ ಹೀಗೇ ಇರಬೇಕೆಂಬ ನಿಯಮ ಅಂತ್ಯ ಇಂತದ್ದೇ ನೆಲೆಯಲ್ಲಿ ಆಗಬೇಕೆಂಬ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ ಎಂದು ಹಿರಿಯ ಸಾಹಿತಿ ನಾಟಕಕಾರ ಡಾ.ನಾ. ದಾಮೋದರಶೆಟ್ಟಿ ಅಭಿಪ್ರಾಯಪಟ್ಟರು. ಕೃಷ್ಣಾಪುರದೊಡ್ಡಿಯ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಪ್ರಗತಿ ಗ್ರಾಫಿಕ್ಸ್ ಹಾಗೂ…