ಪ್ರತಿಯೊಬ್ಬ ವಿಶೇಷಚೇತನರನ್ನು ಗೌರವದಿಂದ ಕಾಣಿ: ಹಿರಿಯ ನ್ಯಾಯಮೂರ್ತಿ ಭೋಲಾ ಪಂಡಿತ್
ವಿಜಯ ದರ್ಪಣ ನ್ಯೂಸ್…. ಪ್ರತಿಯೊಬ್ಬ ವಿಶೇಷಚೇತನರನ್ನು ಗೌರವದಿಂದ ಕಾಣಿ: ಹಿರಿಯ ನ್ಯಾಯಮೂರ್ತಿ ಭೋಲಾ ಪಂಡಿತ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ. ಜಿಲ್ಲೆ, ಡಿ. 03 :- ಸಮಾಜದಲ್ಲಿ ಯಾರೂ ಪರಿಪೂರ್ಣರಲ್ಲ ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನತೆ ಇರುತ್ತದೆ. ವಿಶೇಷಚೇತನರಲ್ಲಿ ವಿಶೇಷ ಪ್ರತಿಭೆ ಹಾಗೂ ಜ್ಞಾನ ಇರುತ್ತದೆ, ಅದನ್ನು ಗುರುತಿಸಿ ಬೆಳೆಸುವ ಜತೆಗೆ ಪ್ರತಿಯೊಬ್ಬ ವಿಶೇಷಚೇತನರನ್ನು ಗೌರವ-ಪ್ರೀತಿಯಿಂದ ಕಾಣಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಭೋಲಾ ಪಂಡಿತ್ ಅವರು ಹೇಳಿದರು. ಬೆಂಗಳೂರು…