ಶ್ರೀಶೈಲಕ್ಕೆ ಭಕ್ತರ ಮರಗಾಲು ಪಾದಯಾತ್ರೆ
ವಿಜಯ ದರ್ಪಣ ನ್ಯೂಸ್….. ಶ್ರೀಶೈಲಕ್ಕೆ ಭಕ್ತರ ಮರಗಾಲು ಪಾದಯಾತ್ರೆ ಆಂಧ್ರಪ್ರದೇಶ: ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಆರಂಭವಾಗಿದೆ. ಯುಗಾದಿ ಸಮೀಪಿಸುತ್ತಿದ್ದು, ಲಕ್ಷಾಂತರ ಭಕ್ತರು ಪವಿತ್ರ ದೇಗುಲದತ್ತ ಪ್ರಯಾಣ ಆರಂಭಿಸಿದ್ದಾರೆ. ಇದರಲ್ಲಿ ಕರ್ನಾಟಕದ ವಿವಿಧ ಊರುಗಳಿಂದ ಬಂದ ಭಕ್ತರು ಇದ್ದು, ನೂರಾರು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗುತ್ತಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಮೂಲಕ ಕೆಲ ಪಾದಯಾತ್ರಿಗಳು ಕಾಲಿಗೆ ಉದ್ದದ ಕೋಲುಗಳನ್ನು ಕಟ್ಟಕೊಂಡು ತೆರಳುತ್ತಿರುವುದು ಕಂಡುಬಂದಿತು. ಇದಕ್ಕೆ ಮರಗಾಲ ನಡಿಗೆ ಅಂತಾ ಕರೆಯಲಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ಶಿವನಾಮ ಸ್ಮರಣೆ…