ಜಾಗತಿಕ ಸಾರಿಗೆ ಕೇಂದ್ರವಾಗಿ ಭಾರತವನ್ನು ಸ್ಥಾಪಿಸುವ ಕಾರ್ಯತಂತ್ರ ಘೋಷಿಸಿದ ಸಿಐಐ
ವಿಜಯ ದರ್ಪಣ ನ್ಯೂಸ್… ಜಾಗತಿಕ ಸಾರಿಗೆ ಕೇಂದ್ರವಾಗಿ ಭಾರತವನ್ನು ಸ್ಥಾಪಿಸುವ ಕಾರ್ಯತಂತ್ರ ಘೋಷಿಸಿದ ಸಿಐಐ 24 ಫೆಬ್ರವರಿ 2025: ದೇಶದಲ್ಲಿ ತ್ವರಿತವಾಗಿ ವಿಸ್ತರಣೆಯಾಗುತ್ತಿರುವ ಸಾರಿಗೆ ವಲಯ ಮತ್ತು ಆರ್ಥಿಕ ಸಂಭಾವ್ಯತೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತವನ್ನು “ಜಾಗತಿಕ ಸಾರಿಗೆ ಕೇಂದ್ರ”ವನ್ನಾಗಿ ಸ್ಥಾಪಿಸುವ ಮಹತ್ವದ ಗುರಿಯನ್ನು ಭಾರತೀಯ ಉದ್ಯಮಗಳ ಸಂಘಟನೆ (ಸಿಐಐ) ಹೊಂದಿದೆ. ಜಾಗತಿಕ ಸಾರಿಗೆ ವಲಯದಲ್ಲಿ ಪ್ರಮುಖ ಪಾತ್ರವನ್ನು ಭಾರತ ವಹಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಉದ್ಯೋಗ ಅವಕಾಶಗಳನ್ನು ಒದಗಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ತನ್ನ ವಿಶಿಷ್ಟ…