ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್
ವಿಜಯ ದರ್ಪಣ ನ್ಯೂಸ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 07 : ಪ್ರಕೃತಿಯಲ್ಲಿ ಎರಡು ಬಗೆಯ ವಿಪತ್ತುಗಳು ಸಂಭವಿಸುತ್ತವೆ. ಒಂದು ಮಾನವ ನಿರ್ಮಿತ ಮತ್ತೊಂದು ಪ್ರಕೃತಿ ನಿರ್ಮಿತ. ಈ ಎರಡೂ ಬಗೆಯ ವಿಕೋಪ ಗಳೂ ಅನಿರೀಕ್ಷಿತವಾಗಿಯೇ ಸಂಭವಿಸುತ್ತವೆ. ಆದ್ದರಿಂದ ಅಂತಹ ವಿಪತ್ತುಗಳನ್ನು ತಡೆಯಲು ಸದಾ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ. ಎನ್. ಶಿವಶಂಕರ್ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ…