ಕರುನಾಡಿನ ಸಾಧಕರು ಸದಾ ಸ್ಮರಣೀಯರು: ಡಿವಿಜಿ ಅವರ 138ನೇ ಜನ್ಮ ದಿನಾಚರಣೆ
ವಿಜಯ ದರ್ಪಣ ನ್ಯೂಸ್…. ಕರುನಾಡಿನ ಸಾಧಕರು ಸದಾ ಸ್ಮರಣೀಯರು ಡಿವಿಜಿ ಅವರ 138ನೇ ಜನ್ಮ ದಿನಾಚರಣೆ ಕಗ್ಗದ ಕರ್ತೃವಿಗೆ ಜನುಮ ದಿನದ ಶತ ಶತ ನಮನಗಳು ಈ ದಿನ ಕನ್ನಡದ ಖ್ಯಾತ ಸಾಹಿತಿ, ಲೇಖಕ, ಮಂಕುತಿಮ್ಮನ ಕಗ್ಗದ ಕರ್ತೃ ಡಿವಿಜಿ ಅವರ ಜನುಮ ದಿನ. ಅವರ ಕುರಿತ ಈ ಮುಂದಿನ ಮಾಹಿತಿ ಮೂಲಕ ಅವರಿಗೆ ನನ್ನ ಈ ನುಡಿನಮನಗಳು…. ಡಾ. ಡಿ.ವಿ.ಗುಂಡಪ್ಪ (೧೭.೦೩.೧೮೮೭ – ೦೭.೧೦.೧೯೭೫): ಡಿ.ವಿ.ಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ…