ಹಣದ ವಿಚಾರಕ್ಕೆ ಸ್ನೇಹಿತನ ಕೊಲೆ: ಇಬ್ಬರು ಬಂಧನ
ವಿಜಯ ದರ್ಪಣ ನ್ಯೂಸ್…. ಹಣದ ವಿಚಾರಕ್ಕೆ ಸ್ನೇಹಿತನ ಕೊಲೆ: ಇಬ್ಬರು ಬಂಧನ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಹಣದ ವಿಚಾರವಾಗಿ ಗೆಳೆಯರಿಂದಲೇ ಕೊಲೆಯಾದ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜು (45) ಕೊಲೆಯಾದ ವ್ಯಕ್ತಿ. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜ್‌ಕುಮಾರ್ ಮತ್ತು ಅನಿಲ್ ಎಂಬುವರನ್ನು ಬಂಧಿಸಿದ್ದಾರೆ. ಉದ್ಯಮಿ ದೇವರಾಜು ಮಾಡುತ್ತಿದ್ದ ವ್ಯವಹಾರದಲ್ಲಿ ರಾಜ್‌ಕುಮಾರ್ ಜೊತೆಗಾರನಾಗಿದ್ದ. ವ್ಯವಹಾರಕ್ಕೆಂದು ಸುಮಾರು 70 ಲಕ್ಷ ಹಣವನ್ನ…