ಆಗದಿರಲಿ ಪ್ರೀತಿಯ ಒರತೆಗೆ ಕೊರತೆ
ವಿಜಯ ದರ್ಪಣ ನ್ಯೂಸ್… ಆಗದಿರಲಿ ಪ್ರೀತಿಯ ಒರತೆಗೆ ಕೊರತೆ ಬದುಕು ಬದಲಾಗುತ್ತಲೇ ಇರುತ್ತದೆ ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇರುವುದಿಲ್ಲ. ನಮಗೆ ಇಷ್ಟವಿರಲಿ ಬಿಡಲಿ ಅದು ಬದಲಾಗುತ್ತಲೇ ಇರುತ್ತದೆ. ನಮ್ಮ ಭಾವ ಬಂಧ ಸಂಬಂಧಗಳು ಬದಲಾಗುತ್ತಲೇ ಇರುತ್ತವೆ. ಬದುಕಲು ಬೇಕಾಗಿರುವುದು ಉತ್ತಮ ಆರೋಗ್ಯ, ತಲೆ ಮೇಲೊಂದು ಸೂರು, ತುಂಬಿದ ಜೇಬು. ಇವೆಲ್ಲ ಇದ್ದರೂ ಒಂದಿಷ್ಟು ಪ್ರೀತಿ ತುಂಬುವ ಜೀವವೊಂದು ಜತೆಗೆ ಇರದಿದ್ದರೆ, ಇವೆಲ್ಲವು ಇದ್ದೂ ಉಪಯೋಗವಿಲ್ಲ. ಕೋಟಿ ಕೋಟಿ ರೂಪಾಯಿ, ಅಪರೂಪದ ರೂಪ ಕೊಡದ ಆನಂದ…