ಇಂದಿನ ಯುವ ಪೀಳಿಗೆ ನಾಡು ನುಡಿ ಸಂಸ್ಕೃತಿಯ ಇತಿಹಾಸವನ್ನು ಅರಿತು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು .
ವಿಜಯ ದರ್ಪಣ ನ್ಯೂಸ್….. ಕನಕಪುರ ರಾಮನಗರ ಜಿಲ್ಲೆ: ಇಂದಿನ ಯುವ ಪೀಳಿಗೆ ನಾಡು ನುಡಿ ಸಂಸ್ಕೃತಿಯ ಇತಿಹಾಸವನ್ನು ಅರಿತು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕನಕಪುರ ತಾಲೂಕು ಶಾಖೆಯ ಅಧ್ಯಕ್ಷ ಮಹದೇವರಾವ್ ತಿಳಿಸಿದರು. ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜು, ಕೋಡಿಹಳ್ಳಿ ಸಭಾಂಗಣದಲ್ಲಿ ಸರ್ಕಾರಿ ಪದವಿ ಕಾಲೇಜು ಕೋಡಿಹಳ್ಳಿ ಹಾಗೂ ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಿ.25/11/2024 ಸೋಮವಾರ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡ ಉಪನ್ಯಾಸಕರ ಬೀಳ್ಕೊಡುಗೆ ಸಮಾರಂಭ ಹಾಗೂ…