ಉಳಿದ ಕಾಲು: ಡಾ. ಕೆ. ಬಿ. ಸೂರ್ಯ ಕುಮಾರ್
ವಿಜಯ ದರ್ಪಣ ನ್ಯೂಸ್, ಮಡಿಕೇರಿ ಉಳಿದ ಕಾಲು ಡಾ. ಕೆ. ಬಿ. ಸೂರ್ಯ ಕುಮಾರ್ ಮಡಿಕೇರಿಯ ಜಿಲ್ಲಾಸ್ಪತ್ರೆಗೂ ಪಿರಿಯಾ ಪಟ್ಟಣ, ರಾಮನಾಥಪುರ, ಬೆಟ್ಟದಪುರಕ್ಕೂ ಅದೇನೋ ಅವಿಭಾಜ್ಯ ಸಂಬಂಧ. ಅಲ್ಲಿಯೇ ಹತ್ತಿರದಲ್ಲಿ ಆಸ್ಪತ್ರೆಗಳು ಇದ್ದರೂ ಅನೇಕ ರೋಗಿಗಳು ಇತ್ತ ಧಾವಿಸುವುದು ಇಂದಿಗೂ ನಡೆದಿದೆ. ಹಿಂದೆ ಆ ಭಾಗಗಳಲ್ಲಿ ಕ್ಷಯರೋಗ ತುಸು ಹೆಚ್ಚಾಗಿದ್ದು ಇಲ್ಲಿಗೆ ಬಂದು ದಾಖಲಾಗುತ್ತಿದ್ದವರ ಸಂಖ್ಯೆ ತುಂಬಾ ಜಾಸ್ತಿ ಇತ್ತು. ಆಗೆಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಯ ರೋಗದ ಇಂಜೆಕ್ಷನ್, ಮಾತ್ರೆ ಮತ್ತು ವಾರ್ಡಿನಲ್ಲಿ ಪುಷ್ಠಿಕರವಾದ ಭೋಜನ, ಮೊಟ್ಟೆ…