ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕಮಾಂಡರ್ ಆಗಿ ಪುಣ್ಯಪೊನ್ನಮ್ಮ ಆಯ್ಕೆ.

ವಿಜಯ ದರ್ಪಣ ನ್ಯೂಸ್ ಜನವರಿ 23: ಮಡಿಕೇರಿಯ ಪುಣ್ಯ ಪೊನ್ನಮ್ಮ ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೆಡ್ ನಲ್ಲಿ ಎನ್‌.ಸಿ.ಸಿ.ಯ ಅಖಿಲ ಭಾರತ ಯುವತಿಯರ ವಿಭಾಗದ ಕಮಾಂಡರ್ ಆಗಿ ಪಾಲ್ಗೊಳ್ಳುತ್ತಿದ್ದಾಳೆ. ಪುಣ್ಯ ಪೊನ್ನಮ್ಮ ಮಡಿಕೇರಿಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ ಮತ್ತು ಫೀಲ್ಡ್ ಕಾರ್ಯಪ್ಪ ಕಾಲೇಜು ಉಪನ್ಯಾಸಕಿ ವಿನಿತ ದೇಚಮ್ಮ ದಂಪತಿಯ ಪುತ್ರಿಯಾಗಿದ್ದಾಳೆ. ಎನ್‌ಸಿಸಿ ಕೆಡೆಟ್ ಆಗಿ ಹಲವಾರು ಕ್ಯಾಂಪ್ ಗಳಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆ ತೋರಿದ್ದಾಳೆ. ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಮೂರನೇ…

Read More

ನಗರಸಭೆ ಪೌರಾಯುಕ್ತರ ವರ್ಗಾವಣೆಗೆ ಸದಸ್ಯರ ನಿರ್ಧಾರ

 ವಿಜಯ ದರ್ಪಣ ನ್ಯೂಸ್  ಮಡಿಕೇರಿ ಜನವರಿ: ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಪೌರಾಯುಕ್ತರ ವರ್ಗಾವಣೆಗೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಬಗ್ಗೆ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಪೌರಾಯುಕ್ತ ವರ್ಗಾವಣೆಯ ಶಿಫಾರಸ್ಸಿಗೆ ಕೈ ಎತ್ತುವುದರ ಮೂಲಕ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಹಮತ ವ್ಯಕ್ತಪಡಿಸಿದರು. ತುರ್ತು ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಸೇರಿದಂತೆ ಸರ್ವ ಸದಸ್ಯರು ಭಾಗಿಯಾಗಿದ್ದರು. ನಗರಸಭೆಯಲ್ಲಿ…

Read More

ತಡಿಯಂಡಮೋಳು ಬೆಟ್ಟಕ್ಕೆ ಪ್ರವಾಸಕ್ಕೆ ಬಂದ ಯುವಕ ಹೃದಯಘಾತದಿಂದ ನಿಧನ.

ವಿಜಯ ದರ್ಪಣ ನ್ಯೂಸ್ ಮಡಿಕೇರಿ:ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟಕ್ಕೆ ಚಾರಣಕೆಂದು ತೆರಳಿದ ಯುವಕ ಹೃದಯಘಾತದಿಂದ ನಿಧನ ಹೊಂದಿದ ಘಟನೆ ಭಾನುವಾರ ನಡೆದಿದೆ. ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ ದುರ್ದೈವಿ. ಬೆಂಗಳೂರಿನ ಜೆಪಿ ನಗರದ ಕಂಪನಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್ ತನ್ನ 5 ಜನ ಸಹಯೋದ್ಯೋಗಿಗಳೊಂದಿಗೆ ಭಾನುವಾರ ಬೆಳಗ್ಗೆ ತಡಿಯಂಡಮೋಳು ಬೆಟ್ಟ ವೀಕ್ಷಣೆಗೆ ತೆರಳಿದ್ದರು. ಬೆಟ್ಟದ ಮೇಲೆ ತಲುಪಿದಾಗ ತೀವ್ರತರದ ಎದೆನೋವು ಕಾಣಿಸಿಕೊಂಡ ಬಳಿಕ ಜತಿನ್ ಕುಮಾರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ…

Read More

ಅರಣ್ಯ ಭೂಮಿ ಒತ್ತುವರಿ.. ಸಂಪೂರ್ಣ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅರಣ್ಯ ಇಲಾಖೆಗೆ ಆದೇಶ *.

ವಿಜಯ ದರ್ಪಣ ನ್ಯೂಸ್  *ಮಡಿಕೇರಿ ನಗರದಲ್ಲಿ ಒಟ್ಟು 282. 50 ಎಕರೆ ಅರಣ್ಯ ಭೂಮಿ ಒತ್ತುವರಿ.. ಸಂಪೂರ್ಣ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅರಣ್ಯ ಇಲಾಖೆ ಆದೇಶ. ತಡವಾಗಿ ಸಂಪೂರ್ಣ ಸರ್ವೆಗೆ ಮುಂದಾದ ಅರಣ್ಯ ಇಲಾಖೆ*. ಮಡಿಕೇರಿ ನಗರದ, ಚೈನ್ ಗೇಟ್, ಅರಣ್ಯ ಭವನ ಸುತ್ತಮುತ್ತ, ಮೆನ್ಸ್ ಕಾಂಪೌಂಡಿನ ಮೇಲ್ಭಾಗ, ಕನ್ನಂಡಬಣೆ ಗಡಿಭಾಗ ಸೋಮವಾರಪೇಟೆ ರಸ್ತೆ ಚೌಕ, ಕರಣಂಗೇರಿ ವ್ಯಾಪ್ತಿ ಸೇರಿದಂತೆ ಒಟ್ಟು 282. 50 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ಹಾಗೂ ಕಟ್ಟಡವನ್ನು…

Read More

ದೇವರಪುರದ ಡಕಾಯಿತಿ ಪ್ರಕರಣ :ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು…

ವಿಜಯ ದರ್ಪಣ ನ್ಯೂಸ್  ,ಕೊಡಗು ಮಡಿಕೇರಿ ಜಿಲ್ಲೆ ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಿನ್ನದ ವ್ಯಾಪಾರಿಯಿಂದ 993 ಗ್ರಾಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ದೂರುದಾರ ಶಂಷದ್ ಚಿನ್ನವನ್ನು 62 ಲಕ್ಷ ರೂಗೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದಾನೆ . ಆದರೆ ಶಂಷದ್ ಪೊಲೀಸರಿಗೆ ನೀಡಿದ ದೂರಿನಲ್ಲಿ 50 ಲಕ್ಷ ರೂಪಾಯಿಗೆ ಮಾರಾಟ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.ಈ ವ್ಯವಹಾರದ ಹಿಂದೆ ಕಳ್ಳಸಾಗಣೆ ದಂದೆ ಇರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ದೇವರಪುರದ ಬಳಿ ಕಾರನ್ನು…

Read More

ಕೇರಳದ ಮಾಜಿ ಯೋಧನಿಗೆ ಮದುವೆ ಮಾಡಿಸುವುದಾಗಿ ವಂಚನೆ :ದಕ್ಷಿಣ ಕನ್ನಡ ಮೂಲದ ಮೂರು ಆರೋಪಿಗಳ ಬಂಧನ.

ವಿಜಯ ದರ್ಪಣ ನ್ಯೂಸ್  ಕೊಡಗು  ಕೇರಳದ ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂಪಾಯಿ ನಗದು ಹಾಗು 2,00000/- ಚೆಕ್ ಅನ್ನು ಪಡೆದು ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಕೊಡಗು ಪೊಲೀಸ್ ತಂಡ ಬಂಧಿಸಿದೆ.   ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್  ಕಡಬದ ನಿವಾಸಿ ಸಾಧಿಕ್  ಮತ್ತೊಬ್ಬ ಆರೋಪಿ ಫೈಸುಲ್, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾನೆ. ಬಂಧಿತ ಆರೋಪಿಗಳಿಂದ ಮೊಬೈಲ್ ನಗದು ಹಾಗೂ ಚೆಕ್ಕನ್ನು ವಶಪಡಿಸಿಕೊಳ್ಳಲಾಗಿದೆ. ಇನೊರ್ವ ಆರೋಪಿ ಅಮೀರ್ ತಲೆಮಾರಿಸಿಕೊಂಡಿದ್ದಾನೆ ….

Read More

ಕುಶಾಲನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ

ವಿಜಯ ದರ್ಪಣ ನ್ಯೂಸ್ ಮಡಿಕೇರಿ ಜಿಲ್ಲೆಯ ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ ಇಂದು ಸಾವಿರಾರು ಭಕ್ತರ ಹರ್ಷದ್ಗಾರದ ನಡುವೆ ಶ್ರುದ್ದಾ ಭಕ್ತಿಯಿಂದ ಜರುಗಿತು. ಅಯ್ಯಪ್ಪ ಮಾಲೆ ಧರಿಸಿದ ವೃತ್ತದಾರಿಗಳು ಕರ್ಪೂರ ಜ್ಯೋತಿ ಬೆಳಗಿಸಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು. ಬೆಳಗಿನಿಂದಲೇ ತಂತ್ರಿಗಳು ಹಾಗೂ ಅರ್ಚಕರು ಗಣಪತಿಗೆ ವಿಶೇಷ ಅಭಿಷೇಕ ಪೂಜೆಗಳು ನೆರವೇರಿಸಿದರು. ದಕ್ಷಿಣ ಭಾರತದಲ್ಲಿ ಶ್ರೀ ಗಣಪತಿಗೆ ರಥೋತ್ಸವ ನೆರವೇರಿಸುವ ಕ್ಷೇತ್ರ ಕುಶಾಲನಗರ ಎಂಬ ಖ್ಯಾತಿಗೆ ಒಳಪಟ್ಟಿದೆ. ಮಧ್ಯಾಹ್ನ 1ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿ ರಥ…

Read More

ವೀರ ಯೋಧ 63 ರಾಷ್ಟ್ರೀಯ ರೈಫಲ್ ಪುರಸ್ಕೃತ ಎಂ.ವಿ.ಪ್ರಾಂಜಲ್ ಗೆ ನಮನ .

ವಿಜಯ ದರ್ಪಣ ನ್ಯೂಸ್  ಮಡಿಕೇರಿ ನವೆಂಬರ್ 29 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ವೀರ ಯೋಧ 63 ರಾಷ್ಟ್ರೀಯ ರೈಫಲ್ ಪುರಸ್ಕೃತ ಎಂ.ವಿ.ಪ್ರಾಂಜಲ್ ಅವರಿಗೆ ನಮನ ಸಲ್ಲಿಸಲಾಯಿತು. ಎಂ.ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿ, ಎಂ.ವಿ.ಪ್ರಾಂಜಲ್ ಅವರ ದೇಶ…

Read More

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಹಿತರಕ್ಷಣಾ ವೇದಿಕೆ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ

ವಿಜಯ ದರ್ಪಣ ನ್ಯೂಸ್ ಮಡಿಕೇರಿ: ನವೆಂಬರ್  ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಕುವೆಂಪು ಉದ್ಯಾನವನದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ರವಿಗೌಡ ವಹಿಸಿಕೊಂಡಿದ್ದರು. ಅತಿಥಿಗಳಾದ ವಿಷ್ಣು ಸೇನಾ ಜಿಲ್ಲಾಧ್ಯಕ್ಷ ರಫೀಕ್ (ದಾದಾ )ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆಮಾಡಿದರು ಮೂಡ ಅಧ್ಯಕ್ಷರಾದ ಮುನೀರ್ ಅಹ್ಮದ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ತಾಲೂಕು ಅಧ್ಯಕ್ಷೆ ಕವಿತಾ ಪ್ರಸಾದ್ ಅವರು…

Read More

ಮಡಿಕೇರಿಯಲ್ಲಿ ಅಮೃತ ಕಳಸ ಯಾತ್ರೆ

ವಿಜಯ ದರ್ಪಣ ನ್ಯೂಸ್  ಮಡಿಕೇರಿ :ಭಾರತ ಸರ್ಕಾರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವಕೇಂದ್ರ ಕೊಡಗು ಮಡಿಕೇರಿ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು. ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು.ಮಡಿಕೇರಿ ಮತ್ತುತಾಲೋಕು ಯುವ ಒಕ್ಕೂಟ ಮಡಿಕೇರಿ.ಹಾಗೂ ಫೀಲ್ಡ್ ಮಾರ್ಷಲ್ ಕೆ. ಎಂ ಕಾಲೇಜು ಮಡಿಕೇರಿ ರಾಷ್ಟ್ರಿಯ ಸೇವಾ ಯೋಜನಾ ಘಟಕ ಇವರ ಅಶ್ರಯದಲ್ಲಿ ಮಣ್ಣು ,ನನ್ನ ದೇಶ…

Read More