ಜಾತಿ ಜನಗಣತಿ……
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಜಾತಿ ಜನಗಣತಿ…… ಜಾತಿ ಪದ್ದತಿಯ ಶಾಪ ವಿಮೋಚನೆಯೇ ? ಜಾತಿ ವ್ಯವಸ್ಥೆಯ ಅಧೀಕೃತಗೊಳಿಸುವಿಕೆಯೇ? ಸಾಮಾಜಿಕ ನ್ಯಾಯವೇ ? ರಾಜಕೀಯ ಪ್ರೇರಿತವೇ ? ಚುನಾವಣಾ ತಂತ್ರಗಾರಿಕೆಯೇ ? ಇದು ಸರಿಯೇ ಅಥವಾ ತಪ್ಪೇ ?….. ನೇರ ಉತ್ತರ ಸುಲಭ ಮತ್ತು ಸರಳ. ಇದರಿಂದ ಲಾಭವಾಗುವವರಿಗೆ ಸರಿ ನಷ್ಟವಾಗುವವರಿಗೆ ತಪ್ಪು….. ಜನರ, ಸಮಾಜದ, ದೇಶದ ಭವಿಷ್ಯದ ದೃಷ್ಟಿಯಿಂದ ಆಳವಾಗಿ ಮತ್ತು ಸಮಗ್ರವಾಗಿ ಯೋಚಿಸಿ ನಂತರ ಈ ಕ್ಷಣದ ವಾಸ್ತವ ಮತ್ತು ಸತ್ಯದ ಅಭಿಪ್ರಾಯ ರೂಪಿಸಿಕೊಳ್ಳಬೇಕು….