ಪರಸಂಗದ ಗೆಂಡೆತಿಮ್ಮ ಮರುಪ್ರದರ್ಶನ…
ವಿಜಯ ದರ್ಪಣ ನ್ಯೂಸ್ …. ಓದಿನರಮನೆಯಲ್ಲಿ ತಿಂಗಳ ಒನಪು ೧೮೯ ಪರಸಂಗದ ಗೆಂಡೆತಿಮ್ಮ ಮರುಪ್ರದರ್ಶನ ಬೆಂಗಳೂರು:ಆಧುನಿಕತೆ ಎಂಬುದು ಎಂಥವರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು, ಕೆಲವೊಮ್ಮೆ ಆವಾಂತರಗಳನ್ನು ಸೃಷ್ಟಿಸಿದರೆ ಮತ್ತೆ ಕೆಲವೊಮ್ಮೆ ಹೊಸ ಸವಾಲುಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಅಂತಹದ್ದೊಂದು ವಿಚಾರ ಪೂರಿತ ವಸ್ತುವನ್ನಿಟ್ಟುಕೊಂಡು ಕನ್ನಡದ ಜನಪ್ರಿಯ ಕಾದಂಬರಿಕಾರ ದಿವಂಗತ ಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ ನಾಟಕವನ್ನು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಗರದ ರೂಪಾಂತರ ತಂಡದ ಮೂವತ್ತು ಕಲಾವಿದರು ಅತ್ಯಂತ ಯಶಸ್ವಿಯಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರ…