ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!!
ವಿಜಯ ದರ್ಪಣ ನ್ಯೂಸ್. ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!! ಜಗತ್ತಿಗಿಂತಲೂ ಹಳೆಯದಾದ ಒಲವಿನ ವ್ಯಾಖ್ಯಾನಕ್ಕೆ ಸೃಜನಶೀಲ ಕಥೆಯ ಮೂಲಕ ಹೊಚ್ಚ ಹೊಸ ಆಖ್ಯಾನ ಬರೆದ ನನ್ನ ಭಾವಬಿಂಬದಂತಿರುವ ಆತ್ಮೀಯ ಗೆಳೆಯ, ಅಕ್ಷರಬಂಧು ಶ್ರೀರಾಜ್ ಆಚಾರ್ಯನಿಗೆ ನನ್ನ ಅನಂತ ಅಭಿನಂದನೆಗಳು. ಅಭಿವ್ಯಕ್ತಿಯ ಆಶಯಕ್ಕೆ ಅನುಗುಣವಾಗಿ ಸೃಷ್ಟಿಶೀಲ ಬರಹಗಾರ ಮತ್ತು ಒಬ್ಬ ಸಾಧಾರಣ ಓದುಗನ ನಡುವೆ ಏರ್ಪಟ್ಟ ಭಾವಸಂವೇದನೆಯ ಪ್ರಸ್ತಾವನೆ ಎಂದಷ್ಟೇ ಇದನ್ನು ಭಾವಿಸಬೇಕೆಂಬ ಅಫಿಡವಿಟ್ಟನ್ನು ಮುಂದಿಟ್ಟೇ ಮುಂದುವರೆಯುತ್ತೇನೆ. ಕಥೆ, ಬರಿಯ ಲೋಕಾನುಭವದ ಸಂಕಥನವಲ್ಲ, ಕಲ್ಪನಾ ವಿವರಣೆ ಮಾತ್ರವೂ…