✨ ಓ ದೇವರೆ ✨
ವಿಜಯ ದರ್ಪಣ ನ್ಯೂಸ್ ✨ ಓ ದೇವರೆ ✨ ಕನಸುಗಳ ಕೈಫಿಯತ್ತನ್ನೇ ಕವಿತೆಯಾಗಿಸಿ ಕೈಗಿಡುತ್ತೇನೆ ನಿನಗದು ಒಪ್ಪಿಗೆಯಾ ಹೇಳು ಕಾಫಿರನು ಕಯಾಮತ್ತಲಿ ಬರೆದ ರುಬಾಯತ್ತಿಗೆ ನೀನು ಕರ್ತನೆಂಬಹಂಕಾರ ಕಳೆದು ಕಾರ್ಯ-ಕಾರಣಗಳನು ಬಿಟ್ಟು ಕೇಳುವೆನೆಂಬ ವಾಗ್ದಾನವಿತ್ತರೆ ಮಾತ್ರ ನಿನ್ನೆದುರು ನಿಂತು ನನ್ನದೊಂದು ಚಿಕ್ಕ ಕವಿತೆ ಓದುತ್ತೇನೆ ***** ಗೌರವವೂ ಬೇಕಿಲ್ಲ ಧನವನಂತೂ ಮೊದಲೇ ಕೇಳುವುದಿಲ್ಲ ಹಾಗಾಗಿ ನಿನಗೆ ಚಿಂತೆ ಬೇಕಿಲ್ಲ ಪ್ರಭುವೇ ಕವಿಯ ಬಗೆಗಿನ ನಿನ್ನ ನಿಲುವೇನೆಂಬುದನು ಶುಭ್ರ ನಿಲುವಂಗಿಯಲಿರುವ ನೀನು ಹೇಳದಿದ್ದರೂ ಸರಿಯೆ ನಿನ್ನ ಸಂಗಮರಮರಿನ ದರಬಾರಿನಲ್ಲಿ…