ವಿಶೇಷಚೇತನರನ್ನು ಪ್ರೀತಿ-ವಾತ್ಸಲ್ಯದಿಂದ ಕಾಣಿ: 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಅಭಿಮತ
ಹಿರಿಯ ನಾಗರಿಕರು ಹಾಗೂ ವಿಶೇಷಚೇತನರನ್ನು ಪ್ರೀತಿ-ವಾತ್ಸಲ್ಯದಿಂದ ಕಾಣಿ: 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಅಭಿಮತ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 01, 2024 :- ಇಂದಿನ ದಿನಮಾನಗಳಲ್ಲಿ ನಗರೀಕರಣ ಬೆಳೆದಂತೆ ಕುಟುಂಬಗಳು ವಿಭಕ್ತವಾಗಿ ಹಿರಿಯರನ್ನು ಪ್ರೀತಿ-ವಾತ್ಸಲ್ಯದಿಂದ ಕಾಣುವುದು ಕಡಿಮೆಯಾಗುತ್ತಿದೆ. ಪ್ರತಿಯೊಂದು ಕುಟುಂಬದ ಕಿರಿಯರು ಹಿರಿಯರಿಗೆ ಮುಪ್ಪಾವಸ್ಥೆಯಲ್ಲಿ ಒಳ್ಳೆಯ ಆರೈಕೆ, ಪ್ರೀತಿ, ಗೌರವವನ್ನು ನೀಡುವುದು ಆದ್ಯ ಕರ್ತವ್ಯವಾಗಿದೆ. ಪ್ರತಿಯೊಂದು ಮನೆಯಲ್ಲೂ ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಂಡು ಸಂತೋಷದ ಜೀವನ ನಡೆಸಲು…