Editor VijayaDarpana

ಆಹಾರ ಘಟಕಗಳ ಮೇಲೆ ದಾಳಿ ಹೆಚ್ಚಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ವಿಜಯ ದರ್ಪಣ ನ್ಯೂಸ್…. ಆಹಾರ ಘಟಕಗಳ ಮೇಲೆ ದಾಳಿ ಹೆಚ್ಚಿಸಲು ಅಧಿಕಾರಿಗಳಿಗೆ ಡಿ.ಸಿ ಸೂಚನೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾ.ಜಿಲ್ಲೆ, ಫೆ 19 :ಜಿಲ್ಲೆಯಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿ ಆಹಾರ ತಯಾರಿಕೆ ಘಟಕಗಳು, ಕ್ಯಾಂಟೀನ್ ಸೇರಿದಂತೆ ಇತರೆ ಆಹಾರ ತಯಾರಿಕಾ ಘಟಕಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ಹೆಚ್ಚಿಸಿ ಕಳಪೆ ಆಹಾರ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ…

Read More

300 ಕೋಟಿ ವೆಚ್ಚದ 220 ಕೆವಿ ವಿದ್ಯುತ್ ಸ್ಥಾವರಕ್ಕೆ ಭೂಮಿ ಪೂಜೆ

ವಿಜಯ ದರ್ಪಣ ನ್ಯೂಸ್… 300 ಕೋಟಿ ವೆಚ್ಚದ 220 ಕೆವಿ ವಿದ್ಯುತ್ ಸ್ಥಾವರಕ್ಕೆ ಭೂಮಿ ಪೂಜೆ ಮುಂದಿನ 30 ವರ್ಷದವರೆಗೂ ನೆಲಮಂಗಲ ಕ್ಷೇತ್ರಕ್ಕೆ ವಿದ್ಯುತ್ ಪೂರೈಕೆ ಕೊರತೆ ಇಲ್ಲ ಬೆಂ.ಗ್ರಾ.ಜಿಲ್ಲೆ.ಫೆಬ್ರವರಿ19.: ನೆಲಮಂಗಲದ ಬಸವನಹಳ್ಳಿಯಲ್ಲಿ ಸುಮಾರು 300 ಕೋಟಿ ರೂಗಳ ವೆಚ್ಚದಲ್ಲಿ 220ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ ನೆಲಮಂಗಲ ತಾಲ್ಲೂಕಿನಲ್ಲಿ ಗೃಹ ಬಳಕೆಗೆ, ಕೃಷಿ, ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ಸಮಸ್ಯೆ ಎದುರಾಗಿತ್ತು….

Read More

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ತರಬೇತಿ ಕಾರ್ಯಾಗಾರ

ವಿಜಯ ದರ್ಪಣ ನ್ಯೂಸ್…. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ತರಬೇತಿ ಕಾರ್ಯಾಗಾರ ದೇವನಹಳ್ಳಿ ಬೆಂಗಳೂರು ಗ್ರಾ.ಜಿಲ್ಲೆ ಫೆ.18. : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಇವರ ಸಹಯೋಗದೊಂದಿಗೆ ಇಂದು ದೇವನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ”ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ ಅನುಷ್ಠಾನ” ಕುರಿತು ಎರಡು ದಿನಗಳ ಓರಿಯಂಟೇಶನ್ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಪ್ರಾಧಿಕಾರದ…

Read More

ಸನಾತನ ಮತ್ತು ವಚನ ಸಂಸ್ಕೃತಿ…….

ವಿಜಯ ದರ್ಪಣ ನ್ಯೂಸ್….. ಸನಾತನ ಮತ್ತು ವಚನ ಸಂಸ್ಕೃತಿ……. ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ. ಸನಾತನ ಧರ್ಮಿಗಳು ವಚನ ಸಾಹಿತ್ಯವನ್ನು ಹೆಚ್ಚು ಹೆಚ್ಚು ವಿಮರ್ಶೆಗೆ ಒಳಪಡಿಸುತ್ತಾ ಅದು ವೇದ ಉಪನಿಷತ್ಗಳ ತದ್ರೂಪ ಎನ್ನುವಂತೆ ಮಾತನಾಡುತ್ತಿದ್ದಾರೆ. ಲಿಂಗಾಯತ ಧರ್ಮದ ಪ್ರತಿಪಾದಕರು ವಚನ ಮತ್ತು ಸನಾತನ ಧರ್ಮದ ಮೌಲ್ಯಗಳಲ್ಲಿ ಇರುವ ವ್ಯತ್ಯಾಸವನ್ನು ಹೇಳುತ್ತಿದ್ದಾರೆ. ಇದು ತುಂಬಾ…

Read More

ತುರ್ತು ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ವಿಜಯ ದರ್ಪಣ ನ್ಯೂಸ್ ಫೆ.20 ರಂದು ತುರ್ತು ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ. ಗ್ರಾ ಜಿಲ್ಲೆ, ಫೆ 18:- ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದ ಐಒಸಿಎಲ್ ಎಲ್.ಪಿ.ಜಿ ಬಾಟ್ಲಿಂಗ್ ಪ್ಲಾಂಟ್ ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಫೆಬ್ರವರಿ 20 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಅಫ್ ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಅಣುಕು…

Read More

ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಅಗತ್ಯ: ವಿಠ್ಠಲ್‌ ಕಾವಳೆ

ವಿಜಯ ದರ್ಪಣ ನ್ಯೂಸ್ ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಅಗತ್ಯ: ಜಿ.ಪಂ. ಯೋಜನಾ ನಿರ್ದೇಶಕ ವಿಠ್ಠಲ್‌ ಕಾವಳೆ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಸಶಕ್ತಿಕರಣವಾಗಲು ಸ್ವ ಉದ್ಯೋಗಾಧಾರಿತ ತರಬೇತಿಗಳು ಅಗತ್ಯವಿದ್ದು, ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಸಹಕಾರ ನೀಡುತ್ತವೆ ಇಂತಹ ತರಬೇತಿಗಳನ್ನು ರುಡ್‌ಸೆಟ್‌ ಸಂಸ್ಥೆಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ವಿಠ್ಠಲ್‌ ಕಾವಳೆ ಅವರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಎನ್‌ಆರ್‌ಎಲ್‌ಎಂ…

Read More

ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಿ: ಸಚಿವ ಕೆ ಎಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್… ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಿ :ಸಚಿವ ಕೆಎಚ್ ಮುನಿಯಪ್ಪ ಮಾರ್ಚ್ ಅಂತ್ಯಕ್ಕೆ ಗರಿಷ್ಟ ನಿವೇಶನ ನೀಡಲು ಗುರಿ -ಕೆ.ಹೆಚ್. ಮುನಿಯಪ್ಪ ಪೋಡಿ ಅಭಿಯಾನದಲ್ಲಿ ಪ್ರಥಮ ಸ್ಥಾನ ಕಾಯ್ದುಕೊಳ್ಳಬೇಕು. ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಫೆ.19 : ಬೇಸಿಗೆ ಆರಂಭವಾಗುತಿದ್ದು, ಜಿಲ್ಲಾಡಳಿತ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು ಮತ್ತು ಜಾನುವಾರುಗಳಿಗೆ ಬೇಸಿಗೆಯಲ್ಲಿ ಬಾಧಿಸುವ ರೋಗಗಳನ್ನು ಸರಿಯಾಗಿ ಉಪಚರಿಸಬೇಕೆಂದು ಆಹಾರ ನಾಗರಿಕ…

Read More

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ…….

ವಿಜಯ ದರ್ಪಣ ನ್ಯೂಸ್…. ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ……. ಕನ್ನಡ ಚಲನಚಿತ್ರ ನಟರೊಬ್ಬರ ಸಾಂಪ್ರದಾಯಿಕ ಮದುವೆಯನ್ನು ಅತ್ಯಂತ ಮಹತ್ವದ ಘಟನೆ ಎಂಬಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ್ದು ಅತಿರೇಕವೇ ಅಥವಾ ತಮ್ಮ ವಿವೇಚನಾಶೀಲತೆಯ ಕೊರತೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ ಅಥವಾ ಸ್ವಾಭಿಮಾನದ ಮತ್ತು ಸುದ್ದಿಯ ಪ್ರಾಮುಖ್ಯತೆ ಅರಿಯುವ ಮಾನಸಿಕ ದಿವಾಳಿತನವೇ……. ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರವರ್ಧಮಾನಕ್ಕೆ ಬಂದಿದ್ದು ಸಾಕಷ್ಟು ಹಿಂದೆಯೇ ಆದರೂ ನಿಜಕ್ಕೂ ಜನಪ್ರಿಯವಾಗಿ, ಪ್ರಭಾವಶೀಲವಾಗಿ ಬೆಳೆದದ್ದು ಸುಮಾರು 15/20 ವರ್ಷಗಳಿಂದ. ಪ್ರಾರಂಭದ ಹಂತದಲ್ಲಿ ಈ ರೀತಿಯ…

Read More

ಕೃಷಿ ಇಲಾಖೆಯಡಿ ಸಹಾಯಧನಕ್ಕೆ ಅರ್ಜಿ ಅಹ್ವಾನ

ವಿಜಯ ದರ್ಪಣ ನ್ಯೂಸ್…. ಕೃಷಿ ಇಲಾಖೆಯಡಿ ಸಹಾಯಧನಕ್ಕೆ ಅರ್ಜಿ ಅಹ್ವಾನ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಫೆಬ್ರವರಿ18: ಕೃಷಿ ಇಲಾಖೆ ವತಿಯಿಂದ 2024-25 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರ ಪುರಸ್ಕೃತ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಸಹಾಯಧನಕ್ಕಾಗಿ ಕೃಷಿ ಇಲಾಖೆಯಿಂದ ನೊಂದಾಯಿತರಾದ ರೈತರು/ ರೈತ ಉತ್ಪಾದಕರ ಸಂಸ್ಥೆ/ಸ್ವಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಜಿಸಲು, ದ್ವಿದಳಧಾನ್ಯ ಮತ್ತು…

Read More

ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ – ಶಿಕ್ಷಿಸುವ ಅಧಿಕಾರ ಇರುತ್ತದೆ ” ರವೀಂದ್ರನಾಥ ಠಾಗೋರ್……

ವಿಜಯ ದರ್ಪಣ ನ್ಯೂಸ್…” ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ – ಶಿಕ್ಷಿಸುವ ಅಧಿಕಾರ ಇರುತ್ತದೆ ” ರವೀಂದ್ರನಾಥ ಠಾಗೋರ್…… ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ….. ನಾವು ಕೆಲವರ ನಡವಳಿಕೆಯನ್ನು ದ್ವೇಷಿಸುತ್ತೇವೆ ಹಾಗೆಯೇ ಅವರ ಪರಿವರ್ತನೆಯನ್ನು ಅಪೇಕ್ಷಿಸುತ್ತೇವೆ. ಆದರೆ ಅದು ಹೇಗೆ ಸಾಧ್ಯ ಎಂಬುದನ್ನು ಉಪೇಕ್ಷಿಸುತ್ತೇವೆ…. ಈಗ ನೇರ ವಿಷಯಕ್ಕೆ ಬರುವುದಾದರೆ, ಕೆಲವು ಸನಾತನ ಧರ್ಮದ ಪ್ರತಿಪಾದಕರು ಅಥವಾ ಅನುಯಾಯಿಗಳು ಮುಸ್ಲಿಮರನ್ನು ದ್ವೇಷಿಸುತ್ತಾರೆ ಹಾಗು ಅವರು ಬದಲಾಗಬೇಕು…

Read More