Editor VijayaDarpana

ಮಾಕಳಿ ಬೆಟ್ಟದಲ್ಲಿ  ಜಿಲ್ಲಾಧಿಕಾರಿ ಅವರಿಂದ ಗಿಡ ನೆಡುವ ಮೂಲಕ ವನಮಹೋತ್ಸವ.

ವಿಜಯ ದರ್ಪಣ ನ್ಯೂಸ್, ದೊಡ್ಡಬಳ್ಳಾಪುರ  ಬೆಂಗಳೂರು ಗ್ರಾ ಜಿಲ್ಲೆ, ಜುಲೈ 03 ಅರಣ್ಯ ಇಲಾಖೆಯ ವನಮಹೋತ್ಸವ ಸಪ್ತಾಹದ (ಜುಲೈ 01 ರಿಂದ 07) ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಬೆಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂದು ಹಲಸು ಗಿಡ, ಆಲದ ಗಿಡ, ಅರಳಿ ಗಿಡ ಇನ್ನಿತರ ಜಾತಿಗಳ ಗಿಡಗಳನ್ನು ನೆಡಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಪ್ರಾದೇಶಿಕ ಅರಣ್ಯ ವಿಭಾಗದ ಉಪ…

Read More

ಬ್ರಾಹ್ಮಣ ಮಹಾಸಭಾಗೆ ನೂತನ ಪದಾಧಿಕಾರಿಗಳ ಆಯ್ಕೆ

ವಿಜಯ ದರ್ಪಣ ನ್ಯೂಸ್, ಬೆಂಗಳೂರು   ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಬ್ರಾಹ್ಮಣ ಸಮುದಾಯ ಇರುವ ಬಸವನಗುಡಿ ಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಸಮುದಾಯದ ಸಂಘಟನೆಯನ್ನು ಮಾಡುತ್ತ ಹಲವಾರು ಕಾರ್ಯಕ್ರಮ ಮಾಡುತ್ತಿರುವ ಬಸವನಗುಡಿ ಬ್ರಾಹ್ಮಣ ಮಹಾಸಭಾಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಲು ಸಂಘಕ್ಕೆ ಉತ್ಸಾಹಿ, ಯುವಕರ, ಮಹಿಳೆಯರ ಹಾಗೂ ಅಸಕ್ತಿ ಇರುವವರನ್ನು ಪದಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘವು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ತಾವೆಲ್ಲರೂ ಸದಾ ಪೋತ್ಸಾಹ, ಬೆಂಬಲ, ಸಹಕಾರ ನೀಡಬೇಕಾಗಿ …

Read More

HSRP ಅಕ್ರಮಕ್ಕೆ ಅವಕಾಶ ನೀಡಲ್ಲ: ಸಚಿವ ರಾಮಲಿಂಗಾರೆಡ್ಡಿ.

ವಿಜಯ ದರ್ಪಣ ನ್ಯೂಸ್, ಬೆಂಗಳೂರು  HSRP ಗೊಂದಲ; ಅಕ್ರಮಕ್ಕೆ ಅವಕಾಶ ನೀಡಲ್ಲ ಎಂದ ಸಾರಿಗೆ ಸಚಿವರಿಗೆ ಸಂಘಟನೆಗಳ ಅಭಿನಂದನೆ ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಯೋಜನೆ ಜಾರಿಗೆ ವಿಚಾರದಲ್ಲಿ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರಂಭಿಸಿರುವ ಹೋರಾಟಕ್ಕಷ್ಟೇ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಇದೇ ವೇಳೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ…

Read More

ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ನಲ್ಲಿ ಬೆಂಕಿ ಅನಾಹುತ : ಅಣುಕು ಪ್ರದರ್ಶನ

  ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ  ಬೆಂಗಳೂರು ಗ್ರಾ  ಜಿಲ್ಲೆ .ಜುಲೈ  01 ದೇವನಹಳ್ಳಿ ವ್ಯಾಪ್ತಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವಿರುವ ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಪ್ರೈವೇಟ್ ಲಿಮಿಟೆಡ್‌ನ ಅನಿಲ ಸಂಗ್ರಹಾಗಾರದಲ್ಲಿ ಅನಿಲವನ್ನು ಪೈಪ್ ಲೈನ್ ಮೂಲಕ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅನಿಲವು ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಇಡೀ ಪ್ರದೇಶವೇ ಹೊಗೆಯಿಂದ ತುಂಬಿಹೋಯಿತು! ತಕ್ಷಣವೇ ಸಂಬಂಧಿಸಿದ ಕಾರ್ಮಿಕರು ಸಂವಹನ ಕೇಂದ್ರಕ್ಕೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ವೈದ್ಯಾಧಿಕಾರಿಗಳು,…

Read More

ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ.

 ವಿಜಯ ದರ್ಪಣ ನ್ಯೂಸ್, ಜುಲೈ 01 ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ. ಇಂದಿನ ಸುದ್ದಿ ನಾಳೆಗೆ ರದ್ದಿಯಾಗದಂತೆ ಬರೆವ ಎಲ್ಲ ಪತ್ರಕರ್ತರ ಸ್ಮರಣೆಯಲ್ಲಿ….!!! “ಏ ಬದ್ರಿ ಯಾರ್ಲೆ ಆ ಹುಡುಗ ? ಈಶ್ವರಪ್ಪ ಸರ್ ಕಳಿಸಿರೋ ಹುಡುಗ ಆದ್ರೆ ಒಳಗೆ ಬರೋದಕ್ಕೆ ಹೇಳು…ಹಾ !! ಆಮೇಲೆ ಸುರೇಶನ ಹತ್ರ ಫ್ರಂಟ್ ಪೇಜ್ ಕವರ್ ಸ್ಟೋರಿದು ಪ್ರೂಫ್ ಆಯ್ತಾ ಕೇಳಿ ಕಳ್ಸೋದಕ್ ಹೇಳು ಅರ್ಜೆಂಟು…… ಲೆ ಹುಡ್ಗ ಬಾರ್ಲೆ ಇಲ್ಲಿ” “….” “ಹೂಂ ಕೂತ್ಕೋ” “ಏನ್ಲೆ…

Read More

ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಿ: ಸಚಿವ ಕೆ.ಎಚ್. ಮುನಿಯಪ್ಪ

ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ  ಬೆಂಗಳೂರು ಗ್ರಾ. ಜಿಲ್ಲೆ, ಜುಲೈ 01 ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿಮೂಲಗಳಿಲ್ಲವಾದ್ದರಿಂದ ನೀರಿನ ಸಮಸ್ಯೆ ನೀಗಿಸಲು, ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಜಿಲ್ಲೆಯಲ್ಲಿರುವ ಕೆರೆಗಳ ಅಂಗಳದಲ್ಲಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ದೇವನಹಳ್ಳಿ ತಾಲ್ಲೂಕು,…

Read More

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ದರೋಡೆ : ಆಭರಣ ಲೂಟಿ.

  ವಿಜಯ ದರ್ಪಣ ನ್ಯೂಸ್ .. ಮದ್ದೂರು  ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲಿಸಿ ಹೋದ ಬೆನ್ನಲ್ಲೇ ಮಧ್ಯರಾತ್ರಿ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿಯನ್ನು  ಬೆದರಿಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ  ಮದ್ದೂರು ಪಟ್ಟಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಅರಪಟ್ಟು ಗ್ರಾಮದ ಇಂಟೀರಿಯರ್ ಡಿಸೈನರ್ ಮುತ್ತಪ್ಪ ಕೆ.ಕೆ ರವರನ್ನು ಮೂವರು ದುಷ್ಕರ್ಮಿಗಳು ಡ್ರ್ಯಾಗನ್ ತೋರಿಸಿ ಬೆದರಿಸಿ ಅವರ ಬಳಿಯಿದ್ದ…

Read More

ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ…… ಜಯಶ್ರೀ. ಜೆ.ಅಬ್ಬಿಗೇರಿ

ವಿಜಯ ದರ್ಪಣ ನ್ಯೂಸ್ ಜೂನ್ 29 ಲಹರಿ ಸಂಗಾತಿ ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ… ಜಯಶ್ರೀ.ಜೆ. ಅಬ್ಬಿಗೇರಿ ನನ್ನ ಪ್ರೀತಿಯ ಹುಡುಗಿ, ಇನ್ನೇನು ಕನಸು ಕೈಗೂಡಿತು ಬಾಳಿಗೊಂದು ಆಸರೆ ಸಿಕ್ಕಂತಾಯಿತು ಎಂದು ಮನಸ್ಸು ಬಾನಂಗಳದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ಅದೇ ಸಮಯದಲ್ಲಿ ಒಂದೇ ಒಂದು ಸಣ್ಣ ಮುನ್ಸೂಚನೆ ಕೊಡದೆ ನೀನು ಅದೆಲ್ಲಿಗೆ ಹೋದೆ ಗೆಳತಿ? ನಿನ್ನ ಚೆಲುವಾದ ಮೊಗವನ್ನು ನನ್ನ ಬೊಗಸೆಯಲ್ಲಿ ತುಂಬಿಸಿಕೊಳ್ಳಲು ಅರಸುತ್ತಿದ್ದೇನೆ. ಸೂಜಿ ಮಲ್ಲಿಗೆ ಮುಡಿದು ಅಡ್ಡಾಡುವ ಏರು ಯೌವ್ವನದ ಹುಡುಗಿಯರಲ್ಲಿ…

Read More

ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ “ನಂಬರ್ ಪ್ಲೇಟ್” ಕರ್ಮಕಾಂಡ: ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು.

ವಿಜಯ ದರ್ಪಣ ನ್ಯೂಸ್.                            ಬೆಂಗಳೂರು : ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ; ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು ಹಗರಣ ಹಾದಿಯಲ್ಲಿ ಅವಿತಿರುವ ಹೆಗ್ಗಣಗಳು. .‘HSRP’ ಅಕ್ರಮದ ಸಂಚು ಬಯಲು.. ‘ಹೈ ಸೆಕ್ಯೂರ್…’ ಯೋಜನೆಯಲ್ಲಿ ಕಾಣದ ಕೈಗಳ ಚಮತ್ಕಾರ.. ಕೋಟಿ ಲೂಟಿಗೆ ವೇದಿಕೆ ಸಿದ್ದ..? ಸಾರಿಗೆ ಇಲಾಖೆಯಲ್ಲಿ ಕೋಟಿ ಲೂಟಿಗೆ ರಹಸ್ಯ ಸಂಚು? ಏನಿದು ಆರೋಪ? HSRP…

Read More

ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಗೌರವಧನದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನ .

ವಿಜಯ ದರ್ಪಣ ನ್ಯೂಸ್ , ದೇವನಹಳ್ಳಿ  ಬೆಂಗಳೂರು ಗ್ರಾ. ಜಿಲ್ಲೆ ಜೂನ್ 28 ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ವಿಕಲಚೇತನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಸ್ಥಳೀಯ ಸಮರ್ಥ ವಿಕಲಚೇತನರನ್ನು ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನಾಗಿ ಹಾಗೂ ನಗರಸಭೆಗೆ ನಗರ ಪುನರ್ವಸತಿ ಕಾರ್ಯಕರ್ತರನ್ನಾಗಿ ಗೌರವಧನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ…

Read More