ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪ.
ವಿಜಯ ದರ್ಪಣ ನ್ಯೂಸ್…
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪ.
ಜೆಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು ಹೆಚ್ಚಿನ ಜನಸಾಮಾನ್ಯರು ಭಾಗಿಯಾಗಲು ಕರೆ
ಪ್ರತಿ ಪಂಚಾಯತಿ ವತಿಯಿಂದ 20 ಸಾವಿರ ಜನಭಾಗಿಯಾಗಲು ಮನವಿ
ದೇವನಹಳ್ಳಿ. ಎಪ್ರಿಲ್ 25 ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪ ರವರು ಇಂದು ದೇವನಹಳ್ಳಿಯ ಪ್ರವಾಸ ಮಂದಿರದಲ್ಲಿ ಮುಖಂಡರೊಂದಿಗೆ ಸಭೆಯನ್ನು ನಡೆಸಿದರು.
ನಂತರ ಮಾತನಾಡಿದ ಸಚಿವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನಮ್ಮ ಸರ್ಕಾರದ ಎರಡು ವರ್ಷಗಳ ಸಾಧನೆಯ ಸಮಾವೇಶಕ್ಕೆ ಚಾಲನೆ ನೀಡಲಿದ್ದು ಜಿಲ್ಲೆಯಾದ್ಯಂತ ಹೆಚ್ವಿನ ಮಟ್ಟದಲ್ಲಿ ಸಾರ್ವಜನಿಕರು ಸೇರಲು ಕರೆ ನೀಡಿದರು.
ನಮ್ಮ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಸಾಧನಾ ಸಮಾವೇಶ ನಡೆಸುತ್ತಿದ್ದು ವಸತಿ ಇಲಾಖೆಯ ವತಿಯಿಂದ ನಮ್ಮ ದೇವನಹಳ್ಳಿ ಕ್ಷೇತ್ರದಲ್ಲಿ 2500 ಸಾವಿರ ಮನೆಗಳನ್ನು ನೀಡಲು ಈಗಾಗಲೇ ಸಚಿವರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕು ಗಳಿಗೆ 10 ಸಾವಿರ ನಿವೇಶನಗಳಿಗೆ ಮನವಿ ಸಲ್ಲಿಸಿದ್ದು ಅದು ಮಂಜೂರಾತಿ ಯಾಗಲಿದೆ. ಪ್ರತಿ ತಾಲ್ಲೂಕಿಗೆ 2500 ನಿವೇಶನಗಳನ್ನು ಹಂಚಿಕೆ ಮಾಡಿ ಜಿಲ್ಲೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುಧಾಯದವರಿಗೆ ಸಮಾಜ ಕಲ್ಯಾಣ ಇಲಾಖೆಯವತಿಯಿಂದ ಸಹಾಯಧನದ ಯೋಜನೆಗಳು ರಸ್ತೆಗಳ ಅಭಿವೃದ್ಧಿ ಮತ್ತು ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿದ್ದು ಅದು ಅರ್ಹ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ ಎಂದರು.
ಕುಡಿಯುವ ನೀರಿಗೆ ಈಗಾಗಲೇ ಮಂಜೂರಾತಿ ದೊರಕಿದ್ದುಕಾವೇರಿ ನೀರನ್ನು ವಿಜಯಪುರ,ದೇವನಹಳ್ಳಿ ಭಾಗದವರೆಗೂ 5 ನೇ ಹಂತದಲ್ಲಿ ನೀಡಲು ನಿರ್ಧರಿಸಿದ್ದ ಯೋಜನೆ 4 ನೇ ಹಂತದಲ್ಲಿ ಕೊಡಲು ತೀರ್ಮಾನವನ್ನು ಕೈಗೊಳ್ಳಲಾಗಿದೆ.
ವೃಷಭಾವತಿ ನೀರನ್ನು ಎರಡನೇ ಹಂತದಲ್ಲಿ ಈ ಭಾಗಕ್ಕೆ ಹರಿಸಲು ಕ್ರಮವಹಿಸಲಾಗುತ್ತಿದೆ. ಈ ಭಾಗದ ಪಂಚಾಯತಿ ಮಟ್ಟದ ಕೆರೆಗಳಿಗೆ ನೀರು ತುಂಬಿಸಲು ಮಾನ್ಯ ಸಣ್ಣ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ್ದು ಈ ಕಾರ್ಯವು ಪ್ರಗತಿಯಲ್ಲಿದೆ
25 ಕೋಟಿ ರೂಗಳ ವೆಚ್ಚದಲ್ಲಿ ದೇವನಹಳ್ಳಿಯ ರಸ್ತೆ ಗಳ ಅಭಿವೃದ್ಧಿ ಮತ್ತು ದ್ವಿಪಥ ರಸ್ತೆ ಕಾಮಗಾರಿ ಪ್ರಗತಿಯಲಿದೆ .
ನಮ್ಮ ಜಿಲ್ಲೆಯುಲ್ಲಿ ರೈತರು ಕಛೇರಿಗೆ ಹಳೆಯವುದನ್ನು ತಪ್ಪಿಸುವ ಸಲುವಾಗಿ ಪೋಡಿ ಮುಕ್ತ ಜಿಲ್ಲೆಯಾಗಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ.
ಸಾರ್ವಜನಿಕರಿಗೆ ಅನುಕೂಲವಾಗಲು ನಮ್ಮ ಮೆಟ್ರೋ ಯೋಜನೆಯು ದೇವನಹಳ್ಳಿಯವರೆಗೂ ಮಂಜೂರಾಗಿದ್ದು ಮುಂದುನ ದಿನಗಳಲ್ಲಿ ವಿಜಯಪುರದವರೆಗೂ ವಿಸ್ತರಣೆ ಮಾಡಲು ಯೋಜನೆಯನ್ನು ರೂಪಿಸಿ ಅನುಕೂಲ ಮಾಡಲಾಗುವುದು ಎಂದರು.
ಒಟ್ಟಾರೆಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಸಮಗ್ರ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಜಿಲ್ಲೆಯಾದ್ಯಂತ ಹೆಚ್ವಿನ ಮಟ್ಟದಲ್ಲಿ ಜನಸಾಮಾನ್ಯರು ಸೇರುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ, ಸಿ. ಜಗನ್ನಾಥ್, ಪ್ರಸನ್ನಕುಮಾರ್, ಎಸ್ ಆರ್ ರವಿಕುಮಾರ್,ಹಾಗೂ ತಾಲ್ಲೂಕಿನ ಮುಖಂಡರು ಉಪಸ್ಥಿತರಿದ್ದರು.