ಜಿಲ್ಲಾ ಮಟ್ಟದ “ಸರ್ವೋತ್ತಮ ಸರ್ಕಾರಿ ನೌಕರ” ಪ್ರಶಸ್ತಿಗೆ ಆಂಜನೇಯ ಮತ್ತು ಕ್ಯಾತ್ಯಾಯಿನಿ ಆಯ್ಕೆ.

ವಿಜಯ ದರ್ಪಣ ನ್ಯೂಸ್…..

 ಜಿಲ್ಲಾ ಮಟ್ಟದ “ಸರ್ವೋತ್ತಮ ಸರ್ಕಾರಿ ನೌಕರ” ಪ್ರಶಸ್ತಿಗೆ  ಆಂಜನೇಯ ಮತ್ತು  ಕ್ಯಾತ್ಯಾಯಿನಿ ಆಯ್ಕೆ.

ಶಿಡ್ಲಘಟ್ಟ : ತಾಲ್ಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಹಾಗೂ ಆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೂರಿನ ಕಾತ್ಯಾಯಿನಿ ಅವರು 2023ನೇ ಸಾಲಿನ ಜಿಲ್ಲಾ ಮಟ್ಟದ “ಸರ್ವೋತ್ತಮ ಸರ್ಕಾರಿ ನೌಕರ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ಏಪ್ರಿಲ್ 21ರಂದು ನಡೆಯುವ ಸರ್ಕಾರಿ ನೌಕರರ ದಿನಾಚರಣೆ ಸಂದರ್ಭದಲ್ಲಿ, ಜನತೆಗೆ ಉತ್ತಮ ಹಾಗೂ ಗುಣಮಟ್ಟದ ಸೇವೆ ನೀಡುತ್ತಿರುವ ಸರ್ಕಾರಿ ನೌಕರರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ವರ್ಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏಪ್ರಿಲ್-21ರಂದು ಬೆಳಿಗ್ಗೆ-9.30ಕ್ಕೆ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ 1ನೇ ಮಹಡಿಯ ಆಡಿಟೋರಿಯಂನಲ್ಲಿ ನಡೆಯಲಿದೆ.

ಆಂಜನೇಯ ಅವರು ಶಿಡ್ಲಘಟ್ಟದ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾಗಿ ಹಾಗೂ ಜಿಲ್ಲೆಯಲ್ಲಿ ಅಕ್ಷರದಾಸೋಹ ಮತ್ತು ವಯಸ್ಕರ ಶಿಕ್ಷಣಾಧಿಕಾರಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ.

ಮೇಲೂರಿನ ಕೆ.ಕಾತ್ಯಾಯಿನಿ ಅವರು ಆನೂರು ಮತ್ತು ಜೆ.ವೆಂಕಟಾಪುರ ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಗಮನ ನೀಡಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ.

ಈ ಪ್ರಶಸ್ತಿ ಅವರು ನೀಡುತ್ತಿರುವ ಸೇವೆಗಳಿಗೆ ಹಾಗು ಪರಿಶ್ರಮಕ್ಕೂ ಒಲಿದ ಗೌರವವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.