ಕಾಸರಗೋಡು ಜಿಲ್ಲಾ‌ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರಕಟ: ಇಸ್ಮಾಯಿಲ್ ಕಂಡಕರೆಗೆ ಪ್ರಶಸ್ತಿ

ವಿಜಯ ದರ್ಪಣ ನ್ಯೂಸ್….

ಕಾಸರಗೋಡು ಜಿಲ್ಲಾ‌ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರಕಟ: ಇಸ್ಮಾಯಿಲ್ ಕಂಡಕರೆಗೆ ಪ್ರಶಸ್ತಿ

ಕಾಸರಗೋಡು :ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ನೀಡುವು ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗೆ ವಾರ್ತಾಭಾರತಿ ದಿನಪತ್ರಿಕೆಯ ಕೊಡಗು ಜಿಲ್ಲಾ ವಿಶೇಷ ವರದಿಗಾರ ಹಾಗೂ ಶಕ್ತಿ ದಿನಪತ್ರಿಕೆಯ ಬರಹಗಾರ ಕೆ.ಎಂ ಇಸ್ಮಾಯಿಲ್ ಕಂಡಕರೆ ಅವರು ಆಯ್ಕೆಯಾಗಿದ್ದಾರೆ.

ಮೊಗರೊಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಶೀ ಹರ್ಷ ಮೇಲಾಂಟ ನೀಡುವ ಪ್ರಶಸ್ತಿಗೆ ಇಸ್ಮಾಯಿಲ್ ಕಂಡಕರೆ ಆಯ್ಕೆಯಾಗಿದ್ದು, ಇಸ್ಮಾಯಿಲ್ ಕಂಡಕರೆ ಅವರ ವಿಶೇಷ ಜನಪರ ಕಾಳಜಿಯ ವರದಿ” ಅಡಿಕೆ ಪಾಲದ ಅಪಾಯಕಾರಿ ನಡಿಗೆಯೇ ಆಸರೆ”ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯು ನಗದು,ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದ್ದು ಮೇ 03 ರಂದು ಕಾಸರಗೋಡುವಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.